Monday, March 20, 2023
spot_img
- Advertisement -spot_img

ನಾನು ಕನಕಪುರದಲ್ಲೇ ಸ್ಫರ್ಧೇ ಮಾಡೋದು : ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸ್ಪಷ್ಟನೆ

ಬೆಂಗಳೂರು : ನಾನು ಕನಕಪುರದಲ್ಲೇ ಸ್ಫರ್ಧೇ ಮಾಡೋದು, ಮದ್ದೂರು ಮಂಡ್ಯದವರು ಬನ್ನಿ ಬನ್ನಿ ಎಂದು ಕರೆಯುತ್ತಿದ್ದಾರೆ , ಆದ್ರೆ ನಾನು ಸ್ಫರ್ಧೇ ಮಾಡೋದು ಕನಕಪುರದಲ್ಲೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ನನ್ನ ಕುಟುಂಬದವರು ಯಾರೂ ರಾಜಕೀಯಕ್ಕೆ ಬರಲೂ ಬಿಡೋದಿಲ್ಲ, ನಾನು ರಾಜಕಾರಣದಲ್ಲಿ ಇರೋವರೆಗೂ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.ಡಿಕೆಶಿವಕುಮಾರ್ ಗೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೀಸಲು ಒತ್ತಡ ಹೇರಲಾಗಿತ್ತು. ಬಹುಷ: ಮಗಳು ಐಶ್ವರ್ಯಾ, ಅಳಿಯ ಅಮಾರ್ತ್ರ್ಯ ಹೆಗಡೆ ಸ್ಪರ್ಧೀಸುತ್ತಾರೆ ಎಂಬ ಗುಸು ಗುಸು ಕೇಳಿ ಬರ್ತಾ ಇತ್ತು. ಅದರೆ ಈ ಎಲ್ಲ ಊಹಾಪೋಹಗಳಿಗೆ ಡಿಕೆಶಿ ಫುಲ್‌ ಸ್ಟಾಪ್ ಇಟ್ಟಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಕನಕ ಪುರ ಬಿಟ್ಟು ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೀಸಲು ಮನಸ್ಸು ಮಾಡಿದ್ದಾರಾ ? ಅವರ ಕುಟುಂಬದವರನ್ನು ಅಖಾಡಕ್ಕಿಳಿಸುತ್ತಾರಾ ಅನ್ನೋ ಚರ್ಚೆ ಶುರುವಾಗಿತ್ತು.ಜಾತಿ ಹಾಗೂ ಸಿಎಂ ಅಸ್ತ್ರ ಬಳಸಿಕೊಂಡು ಮಂಡ್ಯದಲ್ಲಿ ಕನಕಪುರದ ಬಂಡೆ ಸ್ಪರ್ಧೆ ಮಾಡ್ತಾರೆ ,

ಒಕ್ಕಲಿಗ ಜಾತಿ ಹಾಗೂ ಸಿಎಂ ಅಸ್ತ್ರವನ್ನು ಮುಂದಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಒಂದು ಲೆಕ್ಕಾಚಾರ ಮಾಡುತ್ತಿದ್ದಾರೆಂಬ ಗುಸು ಗುಸು ಕೇಳಿ ಬಂದಿತ್ತು.

Related Articles

- Advertisement -

Latest Articles