ರಾಮನಗರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ದೊಡ್ಡಾಲಹಳ್ಳಿಗೆ ತೆರಳಿ ತಮ್ಮ ಹಕ್ಕು ಚಲಾವಣೆ ಮಾಡಿದರು.ಪತ್ನಿ ಉಷಾ, ಪುತ್ರ ಆಕಾಶ್, ಸಹೋದರ ಡಿ.ಕೆ.ಸುರೇಶ್ ಅವರ ಜೊತೆಗೂಡಿ ಕನಕಪುರದಲ್ಲಿ ತಮ್ಮ ಮನದೇವರು ಕೆಂಕೇರಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಾರಿ ನನ್ನ ಮಗ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾನೆ, ಅವನಂತೆಯೇ ರಾಜ್ಯದಲ್ಲಿ ಸಾಕಷ್ಟು ಯುವಜನರು ಮೊದಲ ಮತದಾನದ ಅವಕಾಶ ಪಡೆದಿದ್ದು, ಉತ್ಸಾಹದಿಂದ ವೋಟ್ ಹಾಕ್ತಾ ಇದ್ದಾರೆ, ಪ್ರಜಾ ತಂತ್ರ ಹಬ್ಬವನ್ನು ಎಲ್ಲರೂ ಸಂಭ್ರಮಿಸಬೇಕು, 13 ರವರೆಗೆ ಕಾಯಬೇಕು, ಜನತೆಯ ಆಶೀರ್ವಾದ ಯಾರಿಗೆ ಸಿಗಲಿದೆ ಎಂದು ಗೊತ್ತಾಗಲಿದೆ ಎಂದರು.
ಡಿಕೆಶಿಯವರು ತಮ್ಮ ವೋಟನ್ನು ಸಂತೋಷದಿಂದ ಚಲಾಯಿಸಿದ್ದು, ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅಲ್ಲದೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೋಟ್ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.