Tuesday, March 28, 2023
spot_img
- Advertisement -spot_img

ಡಿ.ಕೆ.ಸುರೇಶ್ ಸ್ಪರ್ಧೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ: ಡಿಕೆಶಿ

ಬೆಂಗಳೂರು: ಸಂಸದ ಡಿ.ಕೆ. ಸುರೇಶ್ ರಾಮನಗರದಿಂದ ಸ್ಪರ್ಧೆ ಮಾಡುವ ಬಗ್ಗೆ ನನಗೆ ಸಂದೇಶ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಹೈಕಮಾಂಡ್ ನಿಂದ ಸಂದೇಶ ಬಂದಿದ್ದು ಹೌದು. ಈ ಕುರಿತು ಪಾರ್ಟಿ ಹೇಳುತ್ತಿದೆ, ನಾವಿನ್ನು ತೀರ್ಮಾನ ಮಾಡಿಲ್ಲ, ಈ ಬಗ್ಗೆ ಕುಳಿತು ಮಾತಾಡಬೇಕು ಎಂದರು. ಆದರೆ ನಾವು ಅದರ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ಮತ್ತೆ ಬೈ ಎಲೆಕ್ಷನ್ ಎಲ್ಲಾ ಮಾಡುವುದು ನನಗೆ ಇಷ್ಟ ಇಲ್ಲಾ. ಡಿ.ಕೆ. ಸುರೇಶ್ ಅರ್ಜಿಯನ್ನು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು. ಸಂಸದ ಡಿ.ಕೆ. ಸುರೇಶ್ ರಾಮನಗರದಿಂದ ಸ್ಪರ್ಧೆ ಮಾಡುವ ಪ್ರಸ್ತಾಪ ಇದೆ. ಅದನ್ನ ತಳ್ಳಿ ಹಾಕಲ್ಲ ಎಂದರು.

ಸಚಿವ ಸೋಮಣ್ಣ ಜತೆ ತಮ್ಮ ಫೋಟೋ ವೈರಲ್ ಆಗಿರುವ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷಕ್ಕೆ ಬರ್ತಾರೆ ಅಂತ ನಾನು ಹೇಳಿಲ್ಲ. ನಾನು ಕರೆದಿಲ್ಲ, ಅವರ ಕೆಲಸ ಅವರು ಮಾಡಿಕೊಂಡು ಇದ್ದಾರೆ. ಅವರನ್ನ ಯಾಕೆ ಎಳೆಯೋಣ? ಅಧಿವೇಶನ ಮುಗಿಸಿಕೊಂಡು ಬೆಳಗಾವಿಯಿಂದ ಒಂದೇ ಫ್ಲೈಟ್ನಲ್ಲಿ ಬರ್ತಾ ಇದ್ವಿ. ಆ ಫೋಟೋ ವೈರಲ್ ಆಗಿದೆ. ಪಕ್ಕದಲ್ಲಿ ಕುಳಿತುಕೊಂಡ್ರೆ ಏನಿದೆ? ಎಲ್ಲರ ಪಕ್ಕದಲ್ಲಿ ಕುಳಿತುಕೊಳ್ತೀವಿ ಎಂದು ಸ್ಪಷ್ಟಪಡಿಸಿದರು.

Related Articles

- Advertisement -

Latest Articles