Friday, March 24, 2023
spot_img
- Advertisement -spot_img

ಬಿಜೆಪಿಯವರು ಚುನಾವಣೆ ಸಮಯದಲ್ಲಿ ಆಶ್ವಾಸನೆ ಕೊಡಲು ಹೋಗುತ್ತಿದ್ದಾರೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ವಿಜಯಪುರ: ನಾಳೆ ಹೊಸ ವರ್ಷಾಚರಣೆ, 2023ಕ್ಕೆ ಹೊಸ ಬದಲಾವಣೆ ಆಗುತ್ತೆ. 2023ಕ್ಕೆ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಸರ್ಕಾರ ರಚಿಸುತ್ತೆ. ಕಾಂಗ್ರೆಸ್​ ಪಕ್ಷಕ್ಕೆ ರಾಜ್ಯದ ಜನರು ಆಶೀರ್ವಾದ ಮಾಡುತ್ತಾರೆ. ಜನರ ಧ್ವನಿ ಪ್ರಜಾ ಧ್ವನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದರು.

ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ನಾಯಕರು ಅಧಿಕಾರ ಇದ್ದಾಗ ಏನು ಮಾಡಲಿಲ್ಲ. ಅಧಿಕಾರ ಹೋಗೋ ಸಮಯದಲ್ಲಿ ಘೋಷಣೆ ಮಾಡಿದ್ರೆ ಏನು ಸುಖ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿದ್ದರು. ಕೇವಲ 50 ಭರವಸೆಗಳನ್ನು ಮಾತ್ರ ಬಿಜೆಪಿಯವರು ಈಡೇರಿಸಿದ್ದಾರೆ. ನಾವು 169 ಭರವಸೆ ನೀಡಿದ್ದೆವು, 165 ಭರವಸೆ ಈಡೇರಿಸಿದ್ದೆವು ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಗರಿಗೆ ಅಧಿಕಾರ ಕೇವಲ 100 ದಿನ ಅಷ್ಟೇ ಇದೆ. ಏನಾದರೂ ಘೋಷಣೆ ಮಾಡಿದ್ರೆ ಜಾರಿ ಮಾಡಲು ಆಗುತ್ತಾ? ಚುನಾವಣೆ ಸಮಯದಲ್ಲಿ ಆಶ್ವಾಸನೆ ಕೊಡಲು ಹೋಗುತ್ತಿದ್ದಾರೆ. ಆದರೆ ನಾವು ಮುಂದೆ ಏನು ಮಾಡುತ್ತೇವೆ ಎಂದು ಹೇಳುತ್ತೇವೆ ಎಂದರು. ಮೀಸಲಾತಿ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಯಾಕೆ ಪ್ರೆಸ್ ಮೀಟ್ ಮಾಡಲಿಲ್ಲ.

ಈ‌ ಮೀಸಲಾತಿಯನ್ನು ಯಾರು ಒಪ್ಪಲಿಕ್ಕೆ ಸಾಧ್ಯವಿಲ್ಲ. ಇದೆಲ್ಲ ಬರೀ ಮೋಸ. ಟೋಪಿ ಹಾಕಿದ್ದರೂ ಟೋಪಿ ತೆಗೆದು ಈಚೆ ಇಡಬಹುದಿತ್ತು. ಎಲ್ಲಾ ಸಮಾಜಕ್ಕೂ ಇದು ಬ್ರಹ್ಮಾಂಡ ಮೋಸ ಎಂದು ವಾಗ್ದಾಳಿ ನಡೆಸಿದ್ದಾರೆ.

Related Articles

- Advertisement -

Latest Articles