Friday, March 24, 2023
spot_img
- Advertisement -spot_img

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರನ್ನು ಕಾಂಗ್ರೆಸ್​ನಿಂದ ವಜಾ ಮಾಡಬೇಕು : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಂಕಿತ ಉಗ್ರನ ಪರ ಮಾತನಾಡಿದ್ದಾರೆ. ಕೂಡಲೇ ಅವರನ್ನು ಕಾಂಗ್ರೆಸ್​ನಿಂದ ವಜಾ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದರು.

ನಗರದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿ, ಡಿಕೆಶಿ, ಸಿದ್ದರಾಮಯ್ಯ ಮೈಯಲ್ಲಿ ಭುಟ್ಟೋ, ಜಿನ್ನಾ ರಕ್ತ ಹರಿಯುತ್ತಿದೆ. ಡಿಕೆಶಿ ಅವರ ಹೇಳಿಕೆಯನ್ನು ಕಾಂಗ್ರೆಸ್​​ನವರು ಖಂಡಿಸುವ ಕೆಲಸ ಮಾಡಿಲ್ಲ. ಖರ್ಗೆ ಅವರೇ ಮೊದಲು ಡಿಕೆಶಿ, ನಲಪಾಡ್​ನನ್ನ ಪಕ್ಷದಿಂದ ಆಚೆ ಹಾಕಿ ಎಂದು ಕಿಡಿಕಾರಿದರು.

ಕುಕ್ಕರ್ ಬ್ಲಾಸ್ಟ್​ ಮಾಡಿದವನು ಭಯೋತ್ಪಾದಕ ಅಲ್ಲ ಅಂತಾರೆ. ಅಧಿಕಾರ ನಡೆಸಿದ ಡಿ.ಕೆ. ಶಿವಕುಮಾರ್​ಗೆ ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಲ್ಲ. ಪಿಎಫ್​ಐ ಬ್ಯಾನ್​ ಮಾಡಿದಾಗಲೂ ಡಿ.ಕೆ.ಶಿವಕುಮಾರ್​ ಹೀಗೆ ಹೇಳಿದ್ದರು. ದೇಶ ದ್ರೋಹದ ಕಾರಣಕ್ಕೆ ಪಿಎಫ್​ಐ ಸಂಘಟನೆ ಬ್ಯಾನ್​ ಮಾಡಲಾಗಿದೆ. PFI ರೀತಿಯಲ್ಲೇ ಕಾಂಗ್ರೆಸ್ ಬ್ಯಾನ್​ ಮಾಡುವ ಸ್ಥಿತಿ ಬೇಗ ಬರುತ್ತೆ ಎಂದರು. ಪಾಕಿಸ್ತಾನದ ಭಯೋತ್ಪಾದನೆಯನ್ನು ಅಂದೇ ಕಾಂಗ್ರೆಸ್ ಟೀಕಿಸುವ ಕೆಲಸ ಮಾಡಬೇಕಿತ್ತು. ಆದರೆ ಭಯೋತ್ಪಾದನೆಗೆ ಅಂದಿನಿಂದ ಬೆಂಬಲ ಕೊಡುತ್ತಾ ಬಂತು ಎಂದು ಹೇಳಿದರು.

ಪಾಕ್​ನ ನಾಯಿ ಬೊಗಳಿದರೆ ಏನೂ ಮಾಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ನಾಯಕ ಅಂತಾ ಇಡೀ ವಿಶ್ವವೇ ಒಪ್ಪಿದೆ. ಪಾಕ್​ ಸಚಿವ ಬಿಲಾವಲ್ ಭುಟ್ಟೋ ಮೋದಿಗೆ ಕ್ಷಮೆ ಕೇಳಬೇಕು. ಪ್ರಪಂಚದ ಭೂಪಟದಲ್ಲಿ ಪಾಕಿಸ್ತಾನವನ್ನು ಅಳಸಿ ಹಾಕುತ್ತೇವೆ. ಈ ಮೂಲಕ ಅಖಂಡ ಭಾರತ ನಿರ್ಮಾಣ ಆಗುತ್ತದೆ ಎಂದರು.

Related Articles

- Advertisement -

Latest Articles