Wednesday, March 22, 2023
spot_img
- Advertisement -spot_img

ಕಾಂಗ್ರೆಸ್ ರಾಜ್ಯಾಧ್ಯಕ್ಷರ ಹೇಳಿಕೆ ಭಯೋತ್ಪಾದಕ ಚಟುವಟಿಕೆಗೆ ಪ್ರೇರಣೆಯಾಗಿದೆ : ನಳೀನ್ ಕುಮಾರ್‌ ಕಟೀಲ್


ಬೆಂಗಳೂರು : ಕಾಶ್ಮೀರದಲ್ಲಿ ಆರಂಭವಾದ ಭಯೋತ್ಪಾದನೆ ದೇಶದ ಪ್ರತಿ ಊರಿಗೆ ಹಬ್ಬಿದೆ. ಕಾಂಗ್ರೆಸ್ ಪಕ್ಷದಿಂದಲೇ ಈ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಭಯೋತ್ಪಾದನೆ ಅಲ್ಲ ಎಂದು ಬಿಂಬಿಸಿ ಹೇಳಿಕೆ ನೀಡಿದ್ದಾರೆ.

ಪೊಲೀಸರ ಕಾರ್ಯವನ್ನು ಪ್ರಶ್ನೆ ಮಾಡಲು ಕಾಂಗ್ರೆಸ್ ಕೈ ಹಾಕಿದೆ. ಹಿಂದಿನಿಂದಲೂ ಕಾಂಗ್ರೆಸ್ ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿದೆ. ರಾಷ್ಟ್ರ ವಿರೋಧಿ ಕೃತ್ಯದಲ್ಲೂ ತೊಡಗಿದೆ ಎಂದು ಆರೋಪಿಸಿದರು.ಇದು ಡಿಕೆಶಿಯ ಮಾನಸಿಕತೆಯನ್ನು ತೋರಿಸುತ್ತದೆ. ಅವರು ಅಧಿಕಾರಕ್ಕೆ ಬಂದರೆ ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಾರೆ. ಡಿಕೆಶಿ ಹೇಳಿಕೆಯನ್ನು ಖಂಡಿಸುತ್ತೇನೆ. ಕುಕ್ಕರ್ ಬಾಂಬ್ ಸ್ಫೋಟದ ತನಿಖೆಯನ್ನು ಎನ್ಐಎ ಮಾಡುತ್ತಿದೆ. ಅದನ್ನು ಪ್ರಶ್ನಿಸುತ್ತಾ ಚಿಲ್ಲರೆ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.


ಕಾಂಗ್ರೆಸ್ ರಾಜ್ಯಾಧ್ಯಕ್ಷರ ಹೇಳಿಕೆ ಭಯೋತ್ಪಾದಕ ಚಟುವಟಿಕೆಗೆ ಪ್ರೇರಣೆಯಾಗಿದೆ. ಶಾರೀಕ್ ಹಿಂದೆ ಗೋಡೆಬರಹ ಬರೆದಿದ್ದಾಗ ಆತನ ಪರ ಹೇಳಿಕೆಯನ್ನು ನೀಡಿದ್ದರು. ಕಾಂಗ್ರೆಸ್ನದು ಭಯೋತ್ಪಾದನಾ ಮಾನಸಿಕತೆಯಾಗಿದೆ. ಕಾಶ್ಮೀರದ ಕಾಂಗ್ರೆಸ್ ಮುಖಂಡರು ಅಧಿಕಾರಕ್ಕೆ ಬಂದರೆ ಜೈಲಿನಲ್ಲಿರುವ ಉಗ್ರರಿಗೆ ಒಂದು ಕೋಟಿ ರೂ ಮತ್ತು ಉದ್ಯೋಗ ನೀಡುವ ಹೇಳಿಕೆ ನೀಡುತ್ತಾರೆ.

ಕಾಂಗ್ರೆಸ್ ಅವಧಿಯ ಪಿಎಸ್ಐ ಹಗರಣ, ಶಿಕ್ಷಕರ ನೇಮಕಾತಿ ಮತ್ತಿತರ ಭ್ರಷ್ಟಾಚಾರ ಬಗ್ಗೆ ತನಿಖೆಯನ್ನು ಸರ್ಕಾರ ಮಾಡುತ್ತಿದೆ. ಸರಕಾರ ಅದನ್ನು ಮುಚ್ಚಿಹಾಕುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

Related Articles

- Advertisement -

Latest Articles