Sunday, March 26, 2023
spot_img
- Advertisement -spot_img

ಶಾಸಕ ಈಶ್ವರ ಖಂಡ್ರೆ ತಕ್ಷಣವೇ ರಾಜಕೀಯ ಸನ್ಯಾಸ ಪಡೆಯಬೇಕು : ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ

ಭಾಲ್ಕಿ : ಮನೆ ಹಂಚಿಕೆಯಲ್ಲಿ 3000 ಮನೆಗಳ ಬಿಲ್‌ ತಮ್ಮಿಂದ ತಪ್ಪಾಗಿವೆ ಎಂದು ಶಾಸಕ ಈಶ್ವರ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ತಾವೇ ತಪ್ಪೊಪ್ಪಿಕೊಂಡಿದ್ದೀರಿ. ಹೀಗಾಗಿ ಕೂಡಲೇ ರಾಜಕೀಯ ಸನ್ಯಾಸ ಪಡೆಯಬೇಕೆಂದು ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನಿಂದ ಒಂದೇ ಒಂದು ತಪ್ಪಾದರೂ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ ಎಂದು ಪದೇ, ಪದೇ ಹೇಳುವ ನೀವು ಇಷ್ಟೊಂದು ತಪ್ಪು ಮಾಡಿದ್ದೀರಿ, ಹೀಗಾಗಿ ತಕ್ಷಣವೇ ರಾಜಕೀಯ ಸನ್ಯಾಸ ಪಡೆಯಬೇಕು ಎಂದು ಒತ್ತಾಯಿಸಿದರು.

ರೈಲ್ವೆ ಸಲಹಾ ಮಂಡಳಿ ಸದಸ್ಯ ಶಿವರಾಜ ಗಂದಗೆ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಶಾಸಕ ಈಶ್ವರ ಖಂಡ್ರೆ ಪ್ರತಿಯೊಂದು ಕಾಮಗಾರಿಗಳಲ್ಲಿಯೂ ಶೇ.30ರಷ್ಟುಕಮಿಷನ್‌ ಹೊಡೆಯುತ್ತಲಿದ್ದಾರೆ. ಕಾಮಗಾರಿಗಳ ದುರಸ್ತಿ ನೆಪದಲ್ಲಿ ಶೇ.30ರಷ್ಟುಕಮಿಷನ್‌ ಹೊಡೆಯುತ್ತಿರುವುದೇ ತಮ್ಮ ಸಾಧನೆ ಯಾಗಿದೆ ಎಂದು ಆರೋಪಿಸಿದರು.

ಮನೆ ಹಂಚಿಕೆಯಲ್ಲಿ ಶಾಸಕ ಈಶ್ವರ ಖಂಡ್ರೆ ತಪ್ಪೆಸಗಿರುವ ಬಗ್ಗೆ ಬೆಳೆಕಿಗೆ ಬಂದಿದ್ದು, ಹಿಂದಿನ ಜಿಲ್ಲಾ​ಧಿಕಾರಿಗಳು ಅವರಿಗೆ ನೋಟಿಸ್‌ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಇದರ ಬಗ್ಗೆ ಸಿಐಡಿ ತನಿಖೆಗೆ ಆಗ್ರಹಿಸಿರಿ ಎಂದರು.

Related Articles

- Advertisement -

Latest Articles