ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಪದ್ಮನಾಭನಗರದಲ್ಲಿ ಬಲಿಷ್ಠ ಅಭ್ಯರ್ಥಿ ಡಿ.ಕೆ.ಸುರೇಶ್‌ರನ್ನು ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್ ಚಿಂತನೆ ನಡೆಸಿತ್ತು. ಆದ್ರೆ, ಕಾಂಗ್ರೆಸ್ ಸ್ಪರ್ಧೆ ವಿಚಾರವಾಗಿ ಮಧ್ಯೆ ಪ್ರವೇಶ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಲ್ಲಾ ಗೊಂದಲಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ರಘುನಾಥ್ ನಾಯ್ಡು ರನ್ನ ದೂರವಾಣಿ ಮೂಲಕ ಸಂಪರ್ಕಿಸಿ ಕೆಪಿಸಿಸಿ ಕಚೇರಿಗೆ ಕರೆಸಿ ಬಿ ಫಾರಂ ವಿತರಿಸಿದ್ದಾರೆ. ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ಡಿ.ಕೆ ಸುರೇಶ್ ಕಣಕ್ಕಿಳಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.
ಕಾಂಗ್ರೆಸ್ ಅನ್ನ ಶತಾಯಗತಾಯ ಸೋಲಿಸಲೇಬೇಕು ಎಂದು ಪಟ್ಟು ಹಿಡಿದಿರುವ ಬಿಜೆಪಿಗರು ಆರ್.ಅಶೋಕ್ ರನ್ನು ಪದ್ಮನಾಭನಗರದ ಜೊತೆಗೆ ಕನಕಪುರದಲ್ಲಿ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದೆ. ಇದೀಗ ಕಾಂಗ್ರೆಸ್ ಕೂಡಾ ಪದ್ಮನಾಭನಗರದಲ್ಲಿ ಗೆಲ್ಲಬೇಕೆಂದು ಹಟ ತೊಟ್ಟಂತಿದ್ದು, ಈಗಾಗಲೇ ಗುರಪ್ಪ ನಾಯ್ಡುರವರ ಪುತ್ರ ರಘುನಾಥ್ ನಾಯ್ಡುರವರಿಗೆ ಟಿಕೆಟ್ ಘೋಷಿಸಲಾಗಿದೆ.
ಡಿ.ಕೆ ಸುರೇಶ್‌ರವರು ಪದ್ಮನಾಭನಗರಕ್ಕೆ ಬಂದರೆ ಟಿಕೆಟ್ ಬಿಟ್ಟುಕೊಡಲು ಸಿದ್ದ. ಅಲ್ಲದೇ ಅವರನ್ನು 70,000 ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಆಯ್ಕೆ ಮಾಡುತ್ತೇವೆ. ಅಲ್ಲದೇ ಕನಕಪುರದಲ್ಲಿಯೂ ಅಶೋಕ್‌ರನ್ನು ಸೋಲಿಸುತ್ತೇವೆ ಎಂದು ರಘುನಾಥ ನಾಯ್ಡು ಹೇಳಿದ್ದರು. ಡಿ.ಕೆ ಸುರೇಶ್‌ರವರು ಇಲ್ಲಿ ಸ್ಪರ್ಧಿಸಿದರೆ ಯಾವುದೇ ಕ್ಷಣದಲ್ಲಿ ಟಿಕೆಟ್ ತ್ಯಾಗ ಮಾಡಲು ಸಿದ್ದನಿದ್ದೇನೆ ಎಂದಿದ್ದರು.