ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಲೀಕತ್ವದ ಬೆಂಗಳೂರಿನ ರಾಜ ರಾಜ ರಾಜೇಶ್ವರಿ ನಗರದಲ್ಲಿರುವ ಎಜುಕೇಶನ್ ಫೌಂಡೇಶನ್ ಮೇಲೆ ಸಿಬಿ ಐ ದಾಳಿ ನಡೆಸಿದೆ.
5 ವರ್ಷದಲ್ಲಿ 75 ಕೋಟಿಗೂ ಅಧಿಕ ಆಸ್ತಿ ಗಳಿಸಿರುವ ಆರೋಪ ಡಿಕೆಶಿಯವರ ಮೇಲಿದ್ದು,ಸಿಬಿಐ ಗ್ಲೋಬಲ್ ಎಜುಕೇಶನ್ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದು, ಡಿಕೆಶಿವಕುಮಾರ್ ಗೆ ಶಾಕ್ ನೀಡಿದೆ. ಡಿಕೆಶಿ ಬೆಳಗಾವಿ ಅಧಿವೇಶನದಲ್ಲಿರುವಾಗಲೇ ಈ ದಾಳಿ ನಡೆಸಿರೋದೇ ಕುತೂಹಲಕಾರಿಯಾಗಿದೆ. ಸಿಬಿಐ ಅಧಿಕಾರಿಗಳು ಪರೀಶೀಲಿಸಿದ್ದು ನಿಜ ಇದು ನನಗೆ ನಿರಂತರ ಕಿರುಕುಳ ನೀಡುವ ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಾನು ತಪ್ಪು ಮಾಡಿಲ್ಲ ನನಗೆ ಭಯವಿಲ್ಲ ಎಂದು ಹೇಳಿದ್ದಾರೆ.ಈ ವಿಷಯಕ್ಕೆ ಸಂಬಂಧಿಸಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿಯವರು ಐಟಿ, ಇಡಿ, ಸಿಬಿಐ ಮೊದಲಾದ ಸಂಸ್ಥೆಗಳನ್ನು ದುರ್ಬಳಕ ಮಾಡಿಕೊಳ್ಳುತ್ತಿದ್ದಾರೆ. ನಾವು ಈಂತಹ ತಂತ್ರಕ್ಕೆ ಹೆದರ್ತೇವೆ ಅಂದುಕೊಂಡಿದ್ದೇವೆ ಆದರೆ ಯಾವುದೇ ಕಾರಣಕ್ಕೂ ಬಿಜೆಪಿಯವರಿಗೆ ಹೆದರೋದಿಲ್ಲ ಎಂದರು.
ಇನ್ನೂ ಇದೇ ವಿಷಯಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು ಡಿಕೆಶಿವಕುಮಾರ್ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದಿದ್ದಾರೆ.