Wednesday, May 31, 2023
spot_img
- Advertisement -spot_img

ಸಿದ್ದರಾಮಯ್ಯ, ಡಿಕೆಶಿ ದೆಹಲಿಗೆ ಪ್ರಯಾಣ : ಸಂಪುಟ ರಚನೆ ಸಂಬಂಧ ಮಾತುಕತೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದು, ಸಂಪುಟ ಸಚಿವರ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ, ಅಷ್ಟೇ ಅಲ್ಲದೇ ಸಂಪುಟ ಸಚಿವರ ಹೆಸರುಗಳಿಗೆ ಗ್ರೀನ್ ಸಿಗ್ನಲ್ ಪಡೆದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಇನ್ನೂ ನಡೆಯುವ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕನಿಷ್ಟ 12 ರಿಂದ 15 ಸಚಿವರನ್ನು ಸಂಪುಟಕ್ಕೆ ಸೇರಿಸುವ ಸಾಧ್ಯತೆ ಇದೆ , ಈ ಸಂಪುಟ ರಚನೆಯಲ್ಲಿ ಸಮುದಾಯವಾರು, ಪ್ರಾದೇಶಿಕವಾರು, ಮಹಿಳಾ ಪ್ರಾತಿನಿಧ್ಯ ಪರಿಗಣಿಸಲಾಗ್ತಿದೆ, ಬಹುತೇಕ ಹಿರಿಯರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲದೇ ಸಚಿವ ಸಂಪುಟ ಸೇರಲು ಇತ್ತ ಶಾಸಕರು ಭರ್ಜರಿ ಲಾಬಿ ನಡೆಸುತ್ತಿದ್ದಾರೆ,

ನಿನ್ನೆಯಿಂದಲೇ ಹಲವರು ಡಿಕೆಶಿ, ಸಿದ್ದರಾಮಯ್ಯ ಮನೆಗಳಿಗೆ ತೆರಳಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ, ಹಿರಿಯರಿಗೆ ಸಚಿವ ಸ್ಥಾನ ಸಿಗುವ ಜೊತೆಗೆ ಕೆಲವು ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗ್ತಿದೆ.

ಅಂದಹಾಗೆ ಸಂಪುಟ ಸೇರುವ ಸಂಭಾವ್ಯವರಲ್ಲಿ ಡಾ ಜಿ ಪರಮೇಶ್ವರ್, ಕೆಜೆ ಜಾರ್ಜ್ , ರಾಮಲಿಂಗಾರೆಡ್ಡಿ, ಎಂ.ಬಿ ಪಾಟೀಲ್, ಆರ್, ವಿ ದೇಶಪಾಂಡೆ, ಹೆಚ್ ಕೆ ಪಾಟೀಲ್ , ಎಂಕೃಷ್ಣಪ್ಪ, ಪ್ರಿಯಾಂಕ್‌ ಖರ್ಗೆ, ಸತೀಶ್ ಜಾರಕಿಹೊಳಿ, ಯುಟಿ ಖಾದರ್ ಲಕ್ಷ್ಮೀ ಹೆಬ್ಬಾಳಕರ್ ಹೆಸರು ಕೇಳಿ ಬರ್ತಿದೆ.
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಮಾತುಕತೆ ನಡೆಸಲಿದ್ದಾರೆ. ಸಂಪುಟ ಸೇರುವವರ ಸಂಖ್ಯೆ ಹೆಚ್ಚಿದ್ದು, ಯಾರಿಗೆ ಸಂಪುಟದಲ್ಲಿ ಸ್ಥಾನ ಕಾದುನೋಡಬೇಕಿದೆ.

Related Articles

- Advertisement -

Latest Articles