ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಸ್ಯಾಂಟ್ರೋ ರವಿಯನ್ನಾದ್ರೂ ಸೇರಿಸಿಕೊಳ್ಳಲಿ, ಫೈಟರ್ ರವಿಯವರನ್ನಾದ್ರೂ ಸೇರಿಸಿಕೊಳ್ಳಲಿ ಅದು ಅವರ ಪಕ್ಷದ ವಿಚಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನ ಮಂತ್ರಿಗಳು ರೌಡಿಶೀಟರ್ ಗೆ ಕೈ ಮುಗಿದ ಬಗ್ಗೆ ಪ್ರತಿಕ್ರಿಯಿಸಿದರು. ಬಿಜೆಪಿಗೆ ಯಾರಾದ್ರೂ ಬರಲಿ, ಅತ್ಯಾಚಾರಿಗಳನ್ನು ಜೊತೆಯಲ್ಲಿಟ್ಟುಕೊಳ್ಳಲಿ, ಲಂಚಕೋರರನ್ನಾದರೂ ಇಟ್ಟುಕೊಳ್ಳಲಿ, ಅದರ ಬಗ್ಗೆ ನಾನ್ಯಾಕೆ ಮಾತಾಡಲಿ ಎಂದರು.
ಪಕ್ಷದ ಟಿಕೆಟ್ ಪಟ್ಟಿ ಅಂತಿಮ ವಿಚಾರವಾಗಿ ಮಾತನಾಡಿ, ಮಾರ್ಚ್ 16 ರಂದು ಇಲ್ಲಿ ಸಭೆ ಕರೆದಿದ್ದು, 17 ರಂದು ಎಲೆಕ್ಷನ್ ಸಭೆ ನಡೆಯಲಿದೆ, ಅಲ್ಲಿ ಫೈನಲ್ ಆಗಲಿದೆ ಎಂದರು. ಧ್ರುವನಾರಾಯಣ ಪುತ್ರನಿಗೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧ್ರುವನಾರಾಯಣ ಕುಟುಂಬಕ್ಕೆ ಹತ್ತಿರವಾಗಿದ್ದಾರೆ , ಪಕ್ಷದ ಟಿಕೆಟ್ ಹಂಚಿಕೆ ವಿಚಾರವಾಗಿ ಅವರು ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಪುಟ್ಟಣ್ಣರಿಗೆ ಟಿಕೆಟ್ ನೀಡೋದು ಬೇಡ ಎಂಬ ಬೇಡಿಕೆ ವಿಚಾರವಾಗಿ ಟಿಕೆಟ್ ಕೊಡ್ತೇವೆ ಅಂತಾ ಯಾರು ಹೇಳಿದ್ರು ? ಪಕ್ಷದ ಅನುಕೂಲಕ್ಕೆ ತಕ್ಕಂತೆ ಪಕ್ಷ ತೀರ್ಮಾನ ಮಾಡಲಿದೆ ಎಂದರು.