ನವದೆಹಲಿ: ಡಿ.ಕೆ ಶಿವಕುಮಾರ್ ಅವರೇ ಸಿಎಂ ಆಗಬೇಕು ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಅಣ್ಣ, ಬಹಳಷ್ಟು ಕಷ್ಟ ಪಟ್ಟಿದ್ದು, ಸಿಎಂ ಆದರೆ ಖುಷಿ ಪಡುತ್ತೇನೆ , ನನ್ನ ನಿರೀಕ್ಷೆ ಪ್ರಕಾರ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು. ಸತತವಾಗಿ 3 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷ ಸಂಕಷ್ಟದಲ್ಲಿ ಇತ್ತು ಎಂದು ಅಭಿಪ್ರಾಯಪಟ್ಟರು.
ಮುಂದಿನ ತೀರ್ಮಾನ ಪಕ್ಷದ ವರಿಷ್ಟರು ತೆಗೆದುಕೊಳ್ಳುತ್ತಾರೆ, ಸೋನಿಯಾ ಗಾಂಧಿಯರಿಗೆ ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತನ್ನ ಕೊಟ್ಟಿದ್ರು. ಆ ಮಾತಿನಂತೆ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ ಎಂದರು.ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಡಿ.ಕೆ.ಶಿವಕುಮಾರ್ ಅವರಿಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಲಿಂಗಾಯತ ಮಠಾಧೀಶರ ಧರ್ಮ ಪರಿಷತ್ ಪತ್ರ ಬರೆದು ಆಗ್ರಹಿಸಿದೆ.
ಸಂಕಷ್ಟ ಸಂದರ್ಭದಲ್ಲಿ ಕಾಂಗ್ರೆಸ್ ಡಿಕೆ.ಶಿಗೆ ಜವಾಬ್ದಾರಿ ನೀಡಿತು. ಕೊಟ್ಟ ಜವಾಬ್ದಾರಿಯನ್ನು ಡಿಕೆ.ಶಿವಕುಮಾರ್ ನಿಭಾಯಿಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು 135 ಸ್ಥಾನಗಳಲ್ಲಿ ಗೆಲ್ಲುವಂತೆ ಮಾಡಿದ್ದಾರೆ. ಹೀಗಾಗಿ ತನ್ನ ಶ್ರಮಕ್ಕೆ ಕೂಲಿ ನೀಡಬೇಕು ಎಂದು ಡಿಕೆಶಿ ಕೇಳಿದ್ದರು ಎಂದರು.