Saturday, June 10, 2023
spot_img
- Advertisement -spot_img

ಜೆಡಿಎಸ್‌ನೊಂದಿಗೆ ಮೈತ್ರಿ ಪ್ರಶ್ನೇಯೇ ಇಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು : ಈ ಬಾರಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೇಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಪೋಸ್ಟ್ ಪೋಲ್ ಸಮೀಕ್ಷೆಗಳಲ್ಲಿ ತೋರಿಸಿರುವ ಅಂಕಿ ಅಂಶಗಳ ಬಗ್ಗೆ ನನಗೆ ನಂಬಿಕೆ ಇಲ್ಲ, ಈ ಮೊದಲೇ ಹೇಳಿದಂತೆ ನಾನು ನನ್ನ ಹೇಳಿಕೆಗೆ ಬದ್ದ, ಈ ಎಲೆಕ್ಷನ್ ನಲ್ಲಿ ಕೈ ಪಕ್ಷ 146 ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಕರ್ನಾಟಕದ ಮತದಾರರು ಪ್ರಜ್ಞಾವಂತರು, ಡಬಲ್ ಎಂಜಿನ್ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ, ಡಬಲ್‌ ಎಂಜಿನ್ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ., ರಾಜ್ಯದ ಜನತೆ ಕಾಂಗ್ರೆಸ್ ಬಗ್ಗೆ ಆಶಾವಾದಿಯಾಗಿದ್ದಾರೆ, ಈ ಬಾರಿ ಕೈಗೆ ಸಂಖ್ಯಾಬಲ ರಚಿಸಲು ಜೆಡಿಎಸ್ ನೊಂದಿಗೆ ಮೈತ್ರಿ ಮಾಡೋ ಪ್ರಶ್ನೆ ಇಲ್ಲ , ಅಲ್ಲದೇ ಇತರೆ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಇಲ್ಲ ಎಂದು ತಿಳಿಸಿದರು.

2018 ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ, ಬಿಜೆಪಿ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ , ಪಿಎಸ್ ಐ ಹಗರಣ, ಅಡುಗೆ ಅನಿಲ ಬೆಲೆ ಏರಿಕೆ ಸೇರಿ ಅನೇಕ ವಿಚಾರಗಳನ್ನು ಎದುರಿಟ್ಟುಕೊಂಡು ಎಲೆಕ್ಷನ್ ನಡೆಸಿದ್ದೇವೆ, ನಾವೇ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

- Advertisement -spot_img

Latest Articles