ಬಾಗಲಕೋಟೆ : ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸವಗೌಡ ಪಾಟೀಲ ಪರಸ್ಪರ ಟೀಕೆ ಮಾಡುತ್ತಿದ್ದಾರೆ, ಈ ಬಗ್ಗೆ ಗೃಹ ಸಚಿವರು ಸ್ವಯಂಪ್ರೇರಿತ ಕೇಸ್ ದಾಖಲಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಿರಾಣಿಯವರು ಯತ್ನಾಳ್ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಜೊತೆಗೆ ಯತ್ನಾಳ್ ಅವರು ನಿರಾಣಿ ಅವರನ್ನು ಪಿಂಪ್ ಮಂತ್ರಿ ಎಂದು ಕರೆದಿದ್ದಾರೆ. ಸಚಿವರು ಮತ್ತು ಶಾಸಕರು ಪರಸ್ಫರ ಗಂಭೀರ ಆರೋಪಗಳನ್ನು ಮಾಡಿದ್ದು, ಈ ಬಗ್ಗೆ ಕ್ರಮವಹಿಸಬೇಕಿದೆ ಎಂದು ಹೇಳಿದ್ದಾರೆ.
ಶಾಸಕ ಯತ್ನಾಳ್ ವಿರುದ್ಧ ನಿರಾಣಿ ಕೊಲೆ ಆರೋಪ ಮಾಡಿದ್ದಾರೆ. ಇನ್ನೊಂದೆಡೆ, ಯತ್ನಾಳ್ ಅವರು ಮುರುಗೇಶ್ ನಿರಾಣಿ ಅವರನ್ನು ಪಿಂಪ್ ಎಂದು ಕರಿತಾರೆ. ಒಬ್ಬ ಮಂತ್ರಿ ಪಿಂಪ್ ಎಂದು ಹೇಳಿದರೆ, ಯಾರ್ಯಾರಿಗೆ ಏನೇನು ವ್ಯವಹಾರ ಮಾಡಿದರು ಎಂಬುದು ಗೊತ್ತಾಗಬೇಕಲ್ಲ ಎಂದು ಅಭಿಪ್ರಾಯಪಟ್ಟರು.
ಸಿದ್ದು ಸ್ಪರ್ಧೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಅವರು ತಾವು ಒಂದು ಕಡೆಯಿಂದ ಸ್ಪರ್ಧಿಸುವುದಾಗಿ ನೇರವಾಗಿ ಹೇಳಿದ್ದಾರೆ. ಒಂದು ಕಡೆಗೆ ಅರ್ಜಿ ಹಾಕಿದ್ದಾರೆ. ಪಕ್ಷ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಕಾಂಗ್ರೆಸ್ ನಿಂದ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರತಿ ತಿಂಗಳಿಗೆ 2 ಸಾವಿರ ರೂ ನೇರವಾಗಿ ಅವರ ಖಾತೆಗೆ ಹಾಕುತ್ತೇವೆ. 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎಂದು ತಿಳಿಸಿದರು.