ಬೆಂಗಳೂರು : ಬಸವರಾಜ ಬೊಮ್ಮಾಯಿಯವರೇ ಹೇಳಿ ಬಿಡಿ, ನಿಮ್ಮ ಮಂತ್ರಿಗಳಿಗೆ ಪ್ಯಾಕಪ್ ಮಾಡೋಕೆ. ನೀವು ಪ್ಯಾಕಪ್ ಮಾಡಿಕೊಂಡು ಹೊರಡಿ ಎಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಿಮ್ಮ ಸರ್ಕಾರಕ್ಕೆ ಕೇವಲ 40-45 ದಿನಗಳು ಉಳಿದಿದ್ದು, ನಿಮ್ಮ ಟೆಂಟ್ ಗಿಂಡ್ ಪ್ಯಾಕ್ ಮಾಡಿಕೊಳ್ಳಿ. ಡೆಟಾಲ್ ನಿಂದ ವಿಧಾನಸೌಧವನ್ನು ಸ್ವಚ್ಛಗೊಳಿಸುತ್ತೇವೆ ಎಂದರು. ನನ್ನ ಬಳಿ ಶುದ್ಧೀಕರಣಕ್ಕೆ ಗೋಮೂತ್ರವೂ ಇದೆ ಎಂದು ಹೇಳಿದ್ದಾರೆ. ಈ ದುಷ್ಟ ಸರ್ಕಾರ ತೊಲಗಬೇಕಿದೆ. ಜನ ಬಯಸಿದ್ದು ಅದನ್ನೇ. ಬೊಮ್ಮಾಯಿಯವರೇ ನಿಮ್ಮ ಮಂತ್ರಿಗಳಿಗೆ ಪ್ಯಾಕ್ ಅಪ್ ಮಾಡಲು ಹೇಳಿ ಎಂದು ತಿಳಿಸಿದ್ದಾರೆ.
ಸುಧಾಕರ ಮೇಲೆ ಭ್ರಷ್ಟಾಚಾರದ ಕೂಪ ಕೂತಿದೆ, ಮುತ್ತು ರತ್ನಗಳೆಲ್ಲೆ ಇದಾರಲ್ಲ ಬಿಜೆಪಿ ಕೈಲಿ, ಆಪರೇಷನ್ ಲೋಟಸ್ ಆದವರ ಕೈಯ್ಯಲ್ಲೇ ಮಾತಾಡಿಸ್ತೀರಲ್ಲ. ನಮ್ಮ ಬಸ್ ಫುಲ್ ಆಗಿದೆ ಯಾರನ್ನೂ ನಾವು ಕರೆದುಕೊಳ್ಳಲ್ಲ. ಬಿ ರಿಪೋರ್ಟ್ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ತಲೆ ಕೆಟ್ಟು ಹೋಗಿಬಿಟ್ಟಿದೆ, ಅವರ ಸರ್ವೆಯಲ್ಲಿ 60-70 ಸೀಟು ದಾಟ್ತಾ ಇಲ್ಲ ಎಂದರು.