ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಯಾರ ಕೈಗೂ ಸಿಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಲೇವಡಿ ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಬೊಮ್ಮಾಯಿಯವರಿಗೆ ಬಜೆಟ್ ಮಂಡಿಸಲು ಸ್ವರವೇ ಇರಲಿಲ್ಲ, ಈ ಬಜೆಟ್ ಕಿವಿಗೆ ಹೂವು ಇಡುವ ಬಜೆಟ್ ಆಗಿದೆ ಎಂದು ಡಿಕೆಶಿ ಕಿವಿಯ ಮೇಲೆ ಹೂವಿಟ್ಟುಕೊಂಡು ಮಾತನಾಡಿದರು.
ಇದು ಬಿಸಿಲು ಕುದುರೆ ಬಜೆಟ್ , ಜಾತ್ರೆಯ ಕನ್ನಡಕದ ರೀತಿಯಲ್ಲಿ ಬಜೆಟ್ ಮಂಡಿಸಲಾಗಿದೆ,ಬೊಮ್ಮಾಯಿ ಮಂಡಿಸಿದ ಬಜೆಟ್ ಶೋ ಬಜೆಟ್, ಇದು ಉಪಯೋಗವಿಲ್ಲ, ಬಾಯ್ ಬಾಯ್ ಬಜೆಟ್ ಬಿಜೆಪಿಯವರು ಜಾತ್ರೆಯ ಕನ್ನಡಕದಂತೆ ಬಜೆಟ್ ಕೊಟ್ಟಿದ್ದಾರೆ ಎಂದರು. ಬಜೆಟ್ ಮುಕ್ತಾಯದ ಬಳಿಕ ವಿಧಾನಸಭೆಯಿಂದ ಹೊರ ತೆರಳುವ ವೇಳೆ ಡಿಕೆ ಶಿವಕುಮಾರ್ ಕಿವಿಯಲ್ಲಿ ಹೂವು ಇರಿಸಿಕೊಂಡೇ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮುಖಾಮುಖಿಯಾಗಿದ್ದು ಡಿಕೆ ಶಿವಕುಮಾರ್ ಕಿವಿಯಲ್ಲಿದ್ದ ಹೂ ತೆಗೆದಿದ್ದಾರೆ. ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯನವರು ಕಿವಿ ಮೇಲೆ ಹೂವು ಇಟ್ಟುಕೊಂಡು ವಾಗ್ದಾಳಿ ಮಾಡಿದ್ದರು. ಆಗ ಸಿದ್ದುಗೆ ಟಾಂಗ್ ಕೊಟ್ಟ ಸಿಎಂ ಬೊಮ್ಮಾಯಿ ಮುಂದಿನ ಸಲವು ನಿಮ್ಮ ಕಿವಿ ಮೇಲೆ ಹೂ ಇಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು.