ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜ್ವರದಿಂದ ಬಳಲುತ್ತಿದ್ದಾರೆ. ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಡಿಕೆ ಶಿವಕುಮಾರ್ ಡಿಕೆಶಿ ಹೇರ್ ಕಟ್ಟಿಂಗ್ ಮಾಡಿಸಿಕೊಂಡಿದ್ದಲ್ಲದೇ ಸ್ಥಳೀಯ ಮುಖಂಡರ ಜೊತೆ ಕನಕಪುರದ ಕೆ.ಎನ್.ಎಸ್. ವೃತ್ತದ ವಾಸು ಹೋಟೆಲ್‍ಗೆ ತೆರಳಿ ಇಡ್ಲಿ ಸವಿದರು.
ಇಡ್ಲಿ ಸವಿದ ಫೋಟೊಗಳನ್ನು ಡಿಕೆಶಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಡ್ಲಿ ಸವಿದ ನಂತರ ಚುನಾವಣೆ ಬಗ್ಗೆ ಸ್ಥಳೀಯರ ಜೊತೆ ಮಾತುಕತೆ ನಡೆಸಿ ಕಾಲ ಕಳೆದ ಬಳಿಕ ಬೆಂಗಳೂರಿಗೆ ಆಗಮಿಸಿದ್ದರು. ಕನಕಪುರದಿಂದ ಬೆಂಗಳೂರಿಗೆ ಆಗಮಿಸಿದ ಡಿಕೆಶಿಗೆ ಜ್ವರ ಬಂದಿದೆ. ಹೀಗಾಗಿ ಸದಾಶಿವನಗರ ನಿವಾಸದಲ್ಲಿ ವಿಶ್ರಾಂತಿಗೆ ಮುಂದಾಗಿದ್ದಾರೆ. ಚುನಾವಣೆಯ ಕಾರಣಕ್ಕೆ ಸತತ ಓಡಾಟ ಮಾಡಿರುವ ಹಿನ್ನೆಲೆಯಲ್ಲಿ ಜ್ವರ ಬಂದಿದೆ.