ಬೆಂಗಳೂರು : ಆತಿಥ್ಯ ಕೊಡುವುದಕ್ಕೆ ಕನಕಪುರದವರು ಫೇಮಸ್. ಒಳ್ಳೆಯ ಆತಿಥ್ಯ ಕೊಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕನಕಪುರದಲ್ಲಿ ಮಿಲಿಟರಿ ಹೋಟೆಲ್ಗಳು ಬಹಳಷ್ಟಿವೆ. ಒಳ್ಳೆಯ ಊಟ ಹಾಕಿಸಿ ಆತಿಥ್ಯ ಕೊಟ್ಟು ಕಳಿಸೋಣ. ಸಾಮ್ರಾಟನಾದರೂ ಬರಲಿ, ಚಕ್ರವರ್ತಿಯಾದರೂ ಬರಲಿ. ಕನಕಪುರದಲ್ಲಿ ಆರ್.ಅಶೋಕ್ಗೆ ಒಳ್ಳೆಯ ಆತಿಥ್ಯ ಕೊಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆರ್. ಅಶೋಕ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದರು.
ರಾಜಕಾರಣ ಫುಟ್ಬಾಲ್ ಅಲ್ಲ, ಚೆಸ್ ಗೇಮ್. ಚೆಸ್ ಆಡ್ತಿದ್ದಾರೆ ಆಡಲಿ, ನನಗೆ ಹೋರಾಟ ಹೊಸದೇನು ಅಲ್ಲ. ಇಡೀ ಜೀವನ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಯಾರ ಹತ್ತಿರವೂ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಆತಿಥ್ಯ ಕೊಡುವುದಕ್ಕೆ ಕನಕಪುರದವರು ಫೇಮಸ್. ಒಳ್ಳೆ ಆತಿಥ್ಯ ಕೊಡೋಣ ಎಂದು ಟಾಂಗ್ ಕೊಟ್ಟಿದ್ದಾರೆ. ಬಿಜೆಪಿ ಪಟ್ಟಿ ಬಗ್ಗೆ ನಾನು ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ಇನ್ನಷ್ಟು ಬದಲಾವಣೆ ಆಗಲಿದೆ ನೋಡ್ತೀರಿ ಎಂದು ತಿಳಿಸಿದರು.