ಚೆನ್ನೈ: ಸಚಿವ ಉದಯನಿಧಿ ಸ್ಟಾಲಿನ್ ಸನಾತನದ ಧರ್ಮದ ಕುರಿತು ನೀಡಿರುವ ಹೇಳಿಕೆ ವಿವಾದದ ಕಿಡಿ ಹೊತ್ತಿಸಿರುವ ನಡುವೆ, ಡಿಎಂಕೆ ಸಂಸದ ಎ.ರಾಜಾ ಸನಾತನದ ಧರ್ಮವನ್ನು ಹೆಚ್ಐವಿ ಮತ್ತು ಕುಷ್ಠ ರೋಗಗಳಿಗೆ ಹೋಲಿಕೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಣೆ ಮಾಡಿರುವ ‘ವಿಶ್ವಕರ್ಮ’ ಯೋಜನೆ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸನಾತದ ಧರ್ಮ ಮತ್ತು ವಿಶ್ವಕರ್ಮ ಯೋಜನೆ ಭಿನ್ನವಲ್ಲ. ಉದಯನಿಧಿ ನೀಡಿರುವ ಹೇಳಿಕೆ ಸರಿಯಾಗಿದೆ. ನಾವು ಇದನ್ನು ಹೆಚ್ಐವಿ , ಕುಷ್ಠರೋಗಗಳಂತೆ ನೋಡಬೇಕು ಎಂದಿದ್ದಾರೆ.
ಇದನ್ನೂ ಓದಿ : ಡಿಎಂಕೆ ಅಂದ್ರೆ ಡೆಂಗ್ಯೂ, ಮಲೇರಿಯಾ, ಸೊಳ್ಳೆ; ಅಣ್ಣಾಮಲೈ ವ್ಯಂಗ್ಯ
ಯಾರನ್ನು ಬೇಕಾದರೂ ಕರೆದುಕೊಂಡು ಬನ್ನಿ. ಎಷ್ಟು ಜನರು ಬೇಕಾದರು ಬರಲಿ. ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಪುಸ್ತಕಗಳನ್ನು ಇಟ್ಟುಕೊಂಡು ದೆಹಲಿಯಲ್ಲಿ ಚರ್ಚೆಗೆ ಸಿದ್ಧನಾಗಿದ್ದೇನೆ. ಪ್ರಧಾನಮಂತ್ರಿ ಅವಕಾಶ ಕೊಟ್ಟರೆ ಸಂಪುಟ ಸದಸ್ಯರಿಗೆ ಸನಾತನ ಧರ್ಮ ಏನೆಂಬುವುದು ನಾನು ತಿಳಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.