ಚೆನ್ನೈ: ಡಿಎಂಕೆ ಎಂದರೆ ಡೆಂಗ್ಯೂ, ಮಲೇರಿಯಾ, ಕೋಸು(ಸೊಳ್ಳೆ) ಹೀಗಾಗಿ ತಮಿಳುನಾಡಿನಲ್ಲಿ ಏನಾದರೂ ನಾಶಮಾಡಬೇಕೆಂದಿದ್ದರೆ ಅದು ಡಿಎಂಕೆ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿಡಿಯೋ ಮೂಲಕ ಕಿಡಿಕಾರಿದ್ದಾರೆ.
ಸನಾತನ ಧರ್ಮ ಕುರಿತ ಉದಯನಿಧಿ ಸ್ಟಾಲಿನ್ ಟೀಕೆ ಸಂಬಂಧ ಟ್ವೀಟ್‌ನಲ್ಲಿ (ಎಕ್ಸ್) ವಿಡಿಯೋ ಹಂಚಿಕೊಂಡಿದ್ದಾರೆ. ‘ನಮಗೆ ಡಿಎಂಕೆ ನಾಟಕ ಗೊತ್ತು. ನಿಮ್ಮ ಅಧಿಕಾರದ ಮೊದಲ ವರ್ಷದಲ್ಲಿ ಸನಾತನ ಧರ್ಮವನ್ನು ವಿರೋಧಿಸುತ್ತೀರಿ, ಎರಡನೇ ವರ್ಷದಲ್ಲಿ ಸನಾತನ ಧರ್ಮವನ್ನು ತೊಡೆದುಹಾಕುವುದಾಗಿ ಹೇಳುತ್ತೀರಿ. ಮೂರನೇ ವರ್ಷದಲ್ಲಿ ನೀವು ಸನಾತನ ಧರ್ಮವನ್ನು ಬೇರುಸಹಿತ ಕಿತ್ತುಹಾಕಲು ಬಯಸುತ್ತೀರಿ. ಆದರೆ ನಾಲ್ಕನೇ ವರ್ಷ, ನೀವು ಹಿಂದೂ ಎಂದು ಹೇಳಿಕೊಳ್ಳುತ್ತೀರಿ. ಇದಾದ ಮೇಲೆ 5ನೇ ವರ್ಷ ನಿಮ್ಮ ಪಕ್ಷದ ಎಲ್ಲಾ ಸದಸ್ಯರಿಗೆ ನೀವೂ ಸಹ ಹಿಂದೂ ಎಂದು ಹೇಳುತ್ತೀರಿ. ತಮಿಳುನಾಡು ಹಲವು ದಶಕಗಳಿಂದ ಈ ನಾಟಕವನ್ನು ನೋಡಿದೆ, ಚುನಾವಣೆ ಬಂದಾಗ ನೀವು ಅಮರ್, ಅಕ್ಬರ್, ಆಂಟನಿ ಆಗುತ್ತೀರಿ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಪೊಯಿಲಾ ಬೈಸಾಖ್ ‘ಬಂಗಾಳ ದಿನ’ವಾಗಿ ನಿರ್ಣಯ ಅಂಗೀಕಾರ
17 ವರ್ಷದಿಂದ ರಾಜಕೀಯದಲ್ಲಿ ರಾಹುಲ್ ವಿಫಲರಾಗಿದ್ದಾರೆ. ಒಂದು ರಾಜ್ಯದಲ್ಲಿ ಅವರು ಅಕ್ಬರ್ ಆಗುತ್ತಾರೆ. ಇನ್ನೊಂದು ಕಡೆ ಅಮರ್ ಆಗುತ್ತಾರೆ, ಬೇರೆ ಕಡೆ ಆಂಟನಿಯಾಗುತ್ತಾರೆ ಎಂದಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ ನಿಮ್ಮ ಪುತ್ರ ಹೇಳುತ್ತಿದ್ದಾರೆ. ಡಿಎಂಕೆ ಎಂದರೆ ‘ಡಿ’ ಡೆಂಗ್ಯೂ, ‘ಎಂ’ ಎಂದರೆ ಮಲೇರಿಯಾ ಮತ್ತು ‘ಕೆ’ ಎಂದರೆ ಕೋಸು (ಸೊಳ್ಳೆ) ಎಂದು ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.