Wednesday, November 29, 2023
spot_img
- Advertisement -spot_img

ನಿಮ್ಮನ್ನ ಲ್ಯಾಂಡ್ ಲಾರ್ಡ್ ಅಂದುಕೊಂಡಿದ್ದೀರಾ : ಅಧಿಕಾರಿಗಳಿಗೆ ಕಂದಾಯ ಸಚಿವ ಕ್ಲಾಸ್

ಧಾರವಾಡ : ಸಾರ್ವಕನಿಕರಿಗೆ ಸಮಸ್ಯೆಯಾದಾಗ ಆಸ್ತಿಯ ಸರ್ವೆ ಮಾಡಿಕೊಡುವುದು ಅಧಿಕಾರಿಗಳ ಜವಾಬ್ದಾರಿ. ಅದನ್ನು ಬಿಟ್ಟು ಸಾರ್ವಜನಿಕರು ಅಧಿಕಾರಿಗಳ ಮನೆ ಬಾಗಿಲು ಕಾಯುವುದು ಅಲ್ಲಾ ಎಂದು ಕಂದಾಯ ಸಚಿವ ಕೃಷ್ಣ ಭೈರೆಗೌಡ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಮೈತ್ರಿ ಎಲ್ಲ ರಾಜಕೀಯ ಪಕ್ಷಗಳಿಗೂ ಅನಿವಾರ್ಯ ಹಾಗೂ ಅಗತ್ಯ : ವೈ.ಎಸ್. ವಿ ದತ್ತಾ

ನಗರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವ ಕೃಷ್ಣ ಭೈರೆಗೌಡ, ಸರ್ವೆ ಇಲಾಖೆಯವರು ನಿಮ್ಮನ್ನು ನೀವು ಏನೆಂದುಕೊಂಡಿದ್ದೀರಿ? ಜನರಿಗೆ ನೀವು ಸರಿಯಾಗಿ ಸ್ಪಂದನೆ ನೀಡುತಿಲ್ಲ. ಸಾರ್ವಜನಿಕರ ಕೆಲಸವನ್ನು ನೀವು ಹೋಗಿ ಮಾಡಿ ಕೊಡಬೇಕೇ ಹೊರತು, ನಿಮ್ಮ ಮನೆ ಬಾಗಿಲಿಗೆ ಬಂದು ಅವರು ಕಾಯುವುದಲ್ಲ, ಮೊದಲು ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ, ಇರೋ ಕಾನೂನು ನಿಮ್ಮ ತಲೆಗೆ ಹೋಗೋದಿಲ್ಲ ಅಂದ್ರೆ ಹೇಗೆ? ನಿಮ್ಮನ್ನ ನೀವು ಲ್ಯಾಂಡ್ ಲಾರ್ಡ್ ಅಂದುಕೊಂಡಿದ್ದೀರಾ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಡಿ.ಸುಧಾಕರ್ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಆಡಳಿತದಲ್ಲಿ ಕೆಲವರ ಉದ್ದೇಶವೇ ಭ್ರಷ್ಟಾಚಾರ ಆಗಿರುತ್ತದೆ ಎಂದ ಅವರು, ಒಳ್ಳೆ ಕೆಲಸ ಮಾಡಿದವರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೊಡುತ್ತೇವೆ. ಒಳ್ಳೆ ಮಾತಿಗೆ ಬಗ್ಗದೇ ತಪ್ಪು ಮಾಡುವವರಿಗೆ ಅವರದೇ ಮಾತಿನಲ್ಲಿ ಕ್ರಮ ತೆಗೆದುಕೊಂಡು ಅವರನ್ನು ಅಮಾನತು ಮಾಡುತ್ತೇವೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಇಲ್ಲಿವರೆಗೆ ಬಡಪಾಯಿ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ಆಗುತ್ತಿತ್ತು. ಆದರೆ ಈಗ ತಪ್ಪು ಮಾಡಿದ ಎಸಿಗಳ ಮೇಲೂ ಕ್ರಮ ತೆಗೆದುಕೊಂಡಿದ್ದೇವೆ. ನೀವು ಹಿಂದೆ ಹೇಗೆ ಕೆಲಸ ಮಾಡಿದ್ದೀರಾ ನಾವು ಕೇಳುವುದಿಲ್ಲಆದರೆ ಈಗ ಜನ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿಯ ನಾಯಕರಿಗೆ ಹಣ ನೀಡಿರುವ ಬಗ್ಗೆ ಬಾಯ್ಬಿಟ್ಟ ಚೈತ್ರಾ ಕುಂದಾಪುರ

ನೀವು ಹೇಳಿದ ಹಾಗೆ ಜಗತ್ತು ಕುಣಿಯಬೇಕಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಡಿಡಿಎಲ್‌ಆರ್ ಅಧಿಕಾರಿ ಕಾರ್ಯವೈಖರಿ ಸರಿ ಇಲ್ಲ, ಅಧಿಕಾರಿಗಳು ನೀವು ಹೇಳಿದ ಹಾಗೆ ನಾವು ಕೇಳಬೇಕಾ? ಸರ್ಕಾರ ಇರೋದು ಜನರ ಸೇವೆಗಾಗಿ, ಅಧಿಕಾರಿಗಳು ಇರುವುದು ಸಾರ್ವಜನಿಕರ ಸಮಸ್ಯೆ ಬಗೆಹರಿಸೋಕೆ, ನೀವು ನಿಮ್ಮ ಮೇಲಾಧಿಕಾರಿಗಳ ಮಾತನ್ನು ಸಹ ಕೇಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles