ನವದೆಹಲಿ: ಭಾರತ ನಿಮ್ಮ ತಂದೆಗೆ ಸೇರಿದೆಯೇ? ಇದು 140 ಕೋಟಿ ಜನರಿಗೆ ಸೇರಿದೆ. ಭಾರತ ನಮ್ಮ ಹೃದಯದಲ್ಲಿ ನೆಲೆಸಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಛತ್ತೀಸ್‌ಗಢದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಷಣ ಮಾಡಿದ ಅವರು, ಕಳೆದ ವರ್ಷ ಬಿಜೆಪಿಯೇ ಇಂಡಿಯಾ ಹೆಸರಲ್ಲಿ ಹತ್ತಾರು ಘೋಷಣೆ ಮಾಡಿದೆ, ಆದರೆ ಈಗ ಅವರೇ ಹೆಸರು ಬದಲಾವಣೆಗೆ ನಿಂತಿದ್ದಾರೆ ಎಂದರು.
ಭಾರತದ ಹೆಸರನ್ನು ಬದಲಿಸುವ ಧೈರ್ಯ ಮಾಡಿ ಎಂದು ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ. ನಾಳೆ ನಾವು ವಿರೋಧ ಪಕ್ಷದ ಮೈತ್ರಿಕೂಟ ತನ್ನನ್ನು ‘ಭಾರತ್’ ಎಂದು ಕರೆದರೆ, ನೀವು (ಬಿಜೆಪಿ) ಮತ್ತೆ ದೇಶದ ಹೆಸರನ್ನು ಬದಲಾಯಿಸುತ್ತೀರಾ?” ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಮನವಿ; ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸ್ಟಾಲಿನ್
ಅನಂತನಾಗ್ ಜಿಲ್ಲೆಯಲ್ಲಿ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಸೈನಿಕರು ಪ್ರಾಣ ಕಳೆದುಕೊಂಡು ಈಗ ನಾಲ್ಕು ದಿನಗಳು ಕಳೆದಿವೆ, ಆದರೆ ಪ್ರಧಾನಿ ಮೋದಿ ಒಂದೇ ಒಂದು ಮಾತನ್ನೂ ಹೇಳಲಿಲ್ಲ. ನೀವು ಯಾಕೆ ಮಾತನಾಡುತ್ತಿಲ್ಲ? ನಿಮಗೆ ದುಃಖವಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಛತ್ತೀಸ್‌ಗಢದಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಜನರಿಗೆ ಹಲವು ಯೋಜನೆಗಳ ಘೋಷಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಮುಂದೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ನಾವು ಅಧಿಕಾರಕ್ಕೆ ಬಂದರೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.