Wednesday, November 29, 2023
spot_img
- Advertisement -spot_img

ಬೀದಿ ನಾಯಿ ಕಡಿದರೆ ಪ್ರತೀ ಹಲ್ಲಿನ ಗುರುತಿಗೆ ₹10,000: ಹೈಕೋರ್ಟ್ ತೀರ್ಪು

ಚಂಡೀಗಢ: ಬೀದಿನಾಯಿ ಕಡಿತ ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿದ ಪಂಜಾಬ್, ಹರಿಯಾಣ ಹೈಕೋರ್ಟ್‌ ಮಹತ್ವದ ತೀರ್ಪಿ ಪ್ರಕಟಿಸಿದೆ. ಬೀದಿನಾಯಿ ಕಚ್ಚಿ ಅಥವಾ ದನಗಳ ದಾಳಿಯಿಂದ ಗಾಯವಾದರೆ ಅದಕ್ಕೆ ಸಂಪೂರ್ಣ ಸರ್ಕಾರವೇ ಹೊಣೆಯಾಗಿರುತ್ತದೆ ಎಂದಿದೆ.

ನಾಯಿ ಕಡಿತದ ಪ್ರಕರಣಗಳಲ್ಲಿ, ಪ್ರತಿ ಹಲ್ಲಿನ ಗುರುತಿಗೆ ಕನಿಷ್ಠ ₹ 10,000 ಮತ್ತು 0.2 ಸೆಂ.ಮೀ ಗಾಯಕ್ಕೆ ಕನಿಷ್ಠ ₹ 20,000 ಪರಿಹಾರವಾಗಿ ನೀಡಬೇಕು ಎಂದು ಕೋರ್ಟ್‌ ಹೇಳಿದೆ. ಬಿಡಾಡಿ ಪ್ರಾಣಿಗಳ ದಾಳಿಗೆ ಸಂಬಂಧಿಸಿದ 193 ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದ್ದು, ಈ ವೇಳೆ ಈ ಸೂಚನೆ ನೀಡಿದೆ.

ಇದನ್ನೂ ಓದಿ: ‘ಮೋದಿ, ಅಮಿತ್ ಶಾ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಸರ್ಕಾರ ಲೂಟಿ ಮಾಡ್ತಿದ್ದಾರೆ’

ಬೀದಿ ನಾಯಿಗಳ ಹಾವಳಿ ಕುರಿತು ದೇಶದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ನಡುವೆಯೇ ಈ ತೀರ್ಪು ಬಂದಿದೆ. ಅಕ್ಟೋಬರ್‌ನಲ್ಲಿ ವಾಘ್ ಬಕ್ರಿ ಟೀ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ 49 ವರ್ಷದ ಪರಾಗ್ ದೇಸಾಯಿ ಅವರ ಸಾವು ಆತಂಕಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ತೆಲಂಗಾಣ ಚುನಾವಣೆ 2023: ನ.17ಕ್ಕೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ!

ಪಂಜಾಬ್, ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢಕ್ಕೆ ಹೈಕೋರ್ಟ್ ಕೂಡ ಒಂದು ಸಮಿತಿಯನ್ನು ರಚಿಸುವಂತೆ ಕೇಳಿದೆ, ಈ ಸಮಿತಿ ಈ ಹಿಂದೆ ನಡೆದ ಘಟನೆಗಳು ಅಥವಾ ಪ್ರಾಣಿಗಳ ದಾಳಿಯ ಪ್ರಕರಣಗಳಲ್ಲಿ ಪಾವತಿಸಬೇಕಾದ ಪರಿಹಾರವನ್ನು ನಿರ್ಧರಿಸುತ್ತದೆ. ಇವುಗಳಲ್ಲಿ ಹಸುಗಳು, ಎತ್ತುಗಳು, ಕತ್ತೆಗಳು, ನಾಯಿಗಳು, ನೀಲಗಾಯ್, ಎಮ್ಮೆಗಳು ಮತ್ತು ಕಾಡು, ಸಾಕುಪ್ರಾಣಿಗಳು ಸೇರಿವೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles