Friday, September 29, 2023
spot_img
- Advertisement -spot_img

ಅಧಿಕಾರ ದುರುಪಯೋಗ ಆರೋಪ; ಡೊನಾಲ್ಡ್ ಟ್ರಂಪ್ ಬಂಧನ!

ವಾಷಿಂಗ್ಟನ್: 2020ರ ಅಮೇರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಬುಡಮೇಲು ಮಾಡಲು ಯತ್ನಿಸಿದ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದ್ದು, ಬಳಿಕ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ಡೊನಾಲ್ಡ್ ಟ್ರಂಪ್ ಕಳೆದ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಿತೂರಿ, ವಂಚನೆ ಯತ್ನ ಸೇರಿದಂತೆ 13 ಪ್ರಕರಣಗಳು ಅವರ ವಿರುದ್ಧ ದಾಖಲಾಗಿದ್ದವು. ಈ ಆರೋಪ ಹಿನ್ನೆಲೆ ಜಾರ್ಜಿಯಾ ಪೊಲೀಸರು ಔಪಚಾರಿಕವಾಗಿ ಟ್ರಂಪ್ ಅವ​ರನ್ನು​​​​​​ ಬಂಧಿಸಿ 200,000 ಡಾಲರ್ ಮೌಲ್ಯದ​​ ಬಾಂಡ್​​​ ಶ್ಯೂರಿಟಿ ನೀಡಿದ ಬಳಿಕ ಜಾಮೀನಿನ ಬಿಡುಗಡೆ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: 40 ವರ್ಷದ ಬಳಿಕ ಗ್ರೀಸ್‌ಗೆ ಭಾರತದ ಪ್ರಧಾನಿ ಪ್ರವಾಸ!

ಅವರನ್ನು ಸುಮಾರು 20 ನಿಮಿಷಗಳ ಕಾಲ ಜೈಲಿನೊಳಗೆ ಇಡಲಾಗಿತ್ತು. ಅಮೆರಿಕ ಇತಿಹಾಸದಲ್ಲೇ ಅಧ್ಯಕ್ಷ ಸ್ಥಾನಕ್ಕೇರಿದ ವ್ಯಕ್ತಿಯೋರ್ವ ಮೊದಲ ಬಾರಿ ಜೈಲು ಸೇರಿ ಬಿಡುಗಡೆಯಾದಂತಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles