ವಿಜಯಪುರ : ಕಾನೂನಿಗಿಂತ ಯಾರೂ ಮೇಲಲ್ಲ, ಕಾನೂನನ್ನು ರಚನೆ ಮಾಡುವವರೇ ಶಾಸಕರು, ಅವರೇ ಕಾನೂನನ್ನು ಪಾಲಿಸಬೇಡಿ ಎನ್ನುವುದು ಎಷ್ಟು ಸರಿ ? ಎಂದು ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಗಣೇಶ ಉತ್ಸವಕ್ಕೆ ಜಿಲ್ಲಾಡಳಿತದಿಂದ ಅನುಮತಿ ವಿಷಯವಾಗಿ ಕೆಲವರಿಂದ ಗೊಂದಲ ಉಂಟಾಗಿದ್ದು, ಇತ್ತೀಚಿಗೆ ಗಣೇಶ ಮಂಡಳಿಗಳ ಸಭೆಯಲ್ಲಿ ಗಣೇಶೋತ್ಸವ ಆಚರಿಸಲು ಯಾರ ಅನುಮತಿ ಬೇಕಾಗಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರು ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ ಸಂದರ್ಭದಲ್ಲಿ ಅಹಿತಕರ ಘಟನೆ ಆಗಬಾರದು, ವ್ಯವಸ್ಥಿತ ರೀತಿಯಲ್ಲಿ ಘನತೆ, ಗೌರವ, ಶೃದ್ಧಾ, ಭಕ್ತಿಯಿಂದ ಉತ್ಸವ ಆಗಬೇಕು ಎನ್ನುವುದು ನಮ್ಮ ಸರ್ಕಾರ ಹಾಗೂ ಜಿಲ್ಲಾಡಳಿತದ ಆಶಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ತಮಿಳುನಾಡಿಗೆ ನೀರು ಬಿಡಲ್ಲ : ಖಾಲಿ ಬಿಂದಿಗೆ ಹಿಡಿದು ವಾಟಾಳ್ ಪ್ರತಿಭಟನೆ
ಯಾರು ಗಣೇಶೋತ್ಸವಕ್ಕೆ ಅನುಮತಿ ಕೇಳ್ತಾರೋ ಅವರಿಗೆ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸುವೆ ಎಂದರು. ಅನುಮತಿ ತೆಗೆದುಕೊಂಡ್ರೆ ಏನಾಗುತ್ತೆ? ಸುಮ್ಮನೆ ಕೆಲವರು ಗೊಂದಲ ಮೂಡಿಸುತ್ತಿದ್ದಾರೆ. ಯಾರೂ ಕೂಡ ಗೊಂದಲ ಮಾಡಿಕೊಳ್ಳಬೇಡಿ. ನಿಮ್ಮ ಜೊತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.