ಯಾದಗಿರಿ : ಸನಾತನ ಧರ್ಮ, ಹಿಂದೂ ಧರ್ಮದ ವಿರುದ್ಧ ಏನಾದ್ರೂ ಮಾತನಾಡಿದರೆ ಅದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಶ್ರೀ ರಾಮಸೇನೆ ರಾಜ್ಯ ಗೌರವಾಧ್ಯಕ್ಷ ಆಂದೋಲ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಮಲಗಿದ್ದರೆ ಕುಂಭಕರ್ಣ, ಎದ್ದರೆ ವೀರಭದ್ರ ಆಗ್ತಾನೆ ಹುಷಾರ್ ಎಂದು ಗುಡುಗಿದ್ದಾರೆ. ಇನ್ನೂ ಬಿಜೆಪಿ -ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಸತತ ಒಂಬತ್ತು ವರ್ಷಗಳ ಕಾಲ ಈ ದೇಶಕ್ಕೆ ಸುಭದ್ರ ಸರ್ಕಾರ ಕೊಟ್ಟಿದ್ದಾರೆ, ಮಾಜಿ ಹೆಚ್ ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ. ದೇವೇಗೌಡರು ಮೋದಿ ಆಡಳಿತ ವೈಖರಿ ಹಾಗೂ ಅಭಿವೃದ್ಧಿ ಮೆಚ್ಚಿ ಜೆಡಿಎಸ್ ಬಿಜೆಪಿಗೆ ಬೆಂಬಲ ಸೂಚಿಸಿದರೆ ಅದನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಗೃಹ ಮಂತ್ರಿ ಜಿ. ಪರಮೇಶ್ವರ ವಿರುದ್ಧ ವಾಗ್ದಾಳಿ ನಡೆಸಿ, ಪರಮೇಶ್ವರ ಅಂತ ನೀವು ಹೆಸರೇಕೆ ಇಟ್ಕೊಂಡಿದ್ದೀರಿ? ಪರಮೇಶ್ವರ ಯಾವಾಗ ಹುಟ್ಟಿದ್ದು? ಪರಮೇಶ್ವರನ ತಂದೆ, ತಾಯಿ ಯಾರು.? ಆಧಾರ ರಹಿತ ಹೆಸರು ನೀವು ಯಾಕೆ ಇಟ್ಕೊಂದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ; ಕಮಲ-ದಳ ಮೈತ್ರಿ ಸುದ್ದಿ: ‘ಮಾಡಿಕೊಳ್ಳಲಿ ಬಿಡ್ರಿ, ನಮಗೇನು’ ಎಂದ ಸಿಎಂ
ಅರೆಬರೆ ಹುಚ್ಚ ಮಂತ್ರಿಗಳು ಕೂಗಾಡ್ತಾರೆ ಅಂದ್ರೆ ಒಪ್ಕೋಬಹುದು, ಜಿ. ಪರಮೇಶ್ವರ ರಾಜ್ಯದ ಒಬ್ಬ ನುರಿತ ಮಂತ್ರಿ ಹೀಗೆ ಮಾತನಾಡೋದು ನಿಜಕ್ಕೂ ದುರ್ದೈವ , ಇಂಥ ಮಂತ್ರಿಗಳ ಕೈಯಲ್ಲಿ ಅಧಿಕಾರ ಸಿಕ್ಕಿದ್ದು ಶೋಚನೀಯ, ಇವರೆಲ್ಲ ಸಂವಿಧಾನದ ಹುದ್ದೆಯಲ್ಲಿರಲು ಅನರ್ಹರು, ಸಿದ್ದರಾಮಯ್ಯ, ಎಂಕೆ ಸ್ಟಾಲೀನ್ ಇವರೆಲ್ಲರನ್ನೂ ಮಂತ್ರಿ ಮಂಡಲದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.