Wednesday, May 31, 2023
spot_img
- Advertisement -spot_img

ನಾನು ಎರಡು ಕ್ಷೇತ್ರದ ಟಿಕೆಟ್ ಕೇಳಿಲ್ಲ: ಡಾ.ಜಿ ಪರಮೇಶ್ವರ್

ತುಮಕೂರು: ನಾನು ಎರಡು ಕ್ಷೇತ್ರಗಳ ಟಿಕೆಟ್​​ ಕೇಳಿಲ್ಲ, ಕೊರಟಗೆರೆ ಕ್ಷೇತ್ರದಲ್ಲಿ ಮಾತ್ರ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ಟಿಕೆಟ್​ ನೀಡುವಂತೆ ಹೈಕಮಾಂಡ್​ ಬಳಿ ನಾನು ಕೇಳಿದ್ದೇನೆ ಎಂದು ನನ್ನ ಬಗ್ಗೆ ಸುದ್ದಿ ಹರಡಿತ್ತು, ಆದ್ರೆ ನಾನು ಎರಡು ಕ್ಷೇತ್ರದ ಟಿಕೆಟ್ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದರು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಜನರ ಬೇಡಿಕೆ ಈಡೇರಿಸ್ತೇವೆ ಎಂದರು.

ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಮೋದಿ ರಾಜ್ಯಕ್ಕೆ‌ ಬಂದಾಗ 10% ಲಂಚದ ಬಗ್ಗೆ ಆರೋಪಿಸಿದ್ದರು. ಪ್ರಣಾಳಿಕೆಯಲ್ಲಿ ಘೋಷಿಸಿರುವುದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.ಬಡವರ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿದೆ. ನ್ಯಾಯ ಕೇಳುವ ಸಮಾಜಗಳಿಗೆ ಸೂಕ್ತ ನ್ಯಾಯ ಕೊಡುವ ಕೆಲಸ ಬಿಜೆಪಿ ಮಾಡಿಲ್ಲ. ಯಾವುದೇ ಅರ್ಜಿ ಪಡೆಯದೇ ಅವರಿಗೆ ಕೇಂದ್ರ ಸರ್ಕಾರ 10% ಮೀಸಲಾತಿ ಕೊಡುವ ಕೆಲಸ ಮಾಡಿದೆ ಎಂದು ವಾಗ್ದಾಳಿ ಮಾಡಿದರು.

Related Articles

- Advertisement -

Latest Articles