ನವದೆಹಲಿ: ನ.15 ರ ಒಳಗೆ ಸಂಜೆ 5 ಗಂಟೆಯೊಳಗೆ ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸಿದ ದೇಣಿಗೆಯ ವಿವರಗಳನ್ನು ಸಲ್ಲಿಸಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗವು ಸೂಚನೆ ನೀಡಿದೆ. ನವೆಂಬರ್ 3 ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೊರಡಿಸಲಾದ ತನ್ನ ನವೆಂಬರ್ 3ರ ಆದೇಶವನ್ನು ಮತ್ತೆ ನೆನಪಿಸಿದೆ.
ಯೋಜನೆ ಪ್ರಾರಂಭವಾದಾಗಿನಿಂದ ನೀಡಲಾದ ಎಲ್ಲಾ ಚುನಾವಣಾ ಬಾಂಡ್‌ಗಳ ವಿವರಗಳನ್ನು ನವೆಂಬರ್ 19 ರೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಇಸಿಐಗೆ ಸೂಚಿಸಿತ್ತು.
ಇದನ್ನೂ ಓದಿ: ‘ಮೋದಿ, ಅಮಿತ್ ಶಾ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಸರ್ಕಾರ ಲೂಟಿ ಮಾಡ್ತಿದ್ದಾರೆ’
ನವೆಂಬರ್ 2023ರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಪುನರುಚ್ಚರಿಸಿದ ಏಪ್ರಿಲ್ 2019 ರ ಮಧ್ಯಂತರ ಆದೇಶಕ್ಕೆ ಅನುಗುಣವಾಗಿ, ಪ್ರತಿ ಬಾಂಡ್‌ನ ವಿರುದ್ಧ ದಾನಿಗಳ ವಿವರಗಳನ್ನು ನೀಡುವಂತೆ ಇಸಿಐ ಎಲ್ಲಾ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿದೆ, “ಅಂತಹ ಪ್ರತಿಯೊಂದು ಬಾಂಡ್‌ನ ಮೊತ್ತ ಮತ್ತು ಸಂಪೂರ್ಣ ವಿವರಗಳು ಪ್ರತಿ ಬಾಂಡ್‌ನ ವಿರುದ್ಧ ಸ್ವೀಕರಿಸಿದ ಕ್ರೆಡಿಟ್‌ನ, ಅಂದರೆ, ಮೊತ್ತವನ್ನು ಜಮಾ ಮಾಡಲಾದ ಬ್ಯಾಂಕ್ ಖಾತೆಯ ವಿವರಗಳು ಮತ್ತು ಅಂತಹ ಪ್ರತಿಯೊಂದು ಕ್ರೆಡಿಟ್‌ನ ದಿನಾಂಕ ಸೇರಿ ಎಲ್ಲಾ ಮಾಹಿತಿ ನೀಡಲು ಕೋರಿದೆ.
ಇದನ್ನೂ ಓದಿ: ಕುಮಾರಸ್ವಾಮಿಯಿಂದ ವಿದ್ಯುತ್ ಕಳ್ಳತನ: ವಿಡಿಯೋ ಸಹಿತ ಆರೋಪಿಸಿದ ಕಾಂಗ್ರೆಸ್
ರಾಜಕೀಯ ಪಕ್ಷಗಳು ಈ ಮಾಹಿತಿಯನ್ನು “ಡಬಲ್ ಸೀಲ್ಡ್ ಕವರ್” ನಲ್ಲಿ ಇಸಿಐನ ಚುನಾವಣಾ ವೆಚ್ಚ ವಿಭಾಗದ ಕಾರ್ಯದರ್ಶಿ ಬಿನೋದ್ ಕುಮಾರ್ ಅವರಿಗೆ ಕಳುಹಿಸಬೇಕು ಮತ್ತು ಅದನ್ನು “ಗೌಪ್ಯ-ಚುನಾವಣಾ ಬಾಂಡ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
” ಎಂದು ಗುರುತಿಸಬೇಕು ಎಂದು ಸೂಚಿಸಲಾಗಿದೆ.