ಶಿವಮೊಗ್ಗ : ನನ್ನ ಮಗಳಿಗೆ ಸಿಬಿಐ ನೋಟೀಸ್ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಬೇಸರಿಸಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿ, ಕಾಲೇಜು ಶಾಲೆ ಶುಲ್ಕ ಕಟ್ಟಿದ್ದರ ಬಗ್ಗೆಯೂ ಕೇಳುತ್ತಿದ್ದಾರೆ ಎಂದು ಹೇಳಿದರು.
ಡಿಕೆಶಿ ಪತ್ರಿಗೆ ಸಿಬಿಐ ನೋಟಿಸ್ ಕೊಟ್ಟಿದ್ದು, 10 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ನನಗೆ ಈ ತಿಂಗಳ 24 ರಂದು ವಿಚಾರಣೆಗೆ ಹಾಜರಾಗಲು ಇಡಿ ನೋಟಿಸ್ ನೀಡಿದೆ, ಇಡಿ ವಿಚಾರಣೆಗೆ ಹೋಗಲೋ ಇಲ್ಲ, ಪ್ರಜಾಧ್ವನಿ ಯಾತ್ರೆ ಮಾಡ್ಲಾ ? ಅನ್ನೋ ಗೊಂದಲ ನನಗಿದೆ,ದಿನಕ್ಕೊಂದು ನೋಟೀಸ್ ನೀಡಿ ಹಿಂಸೆ ಕೊಡ್ತಾ ಇದ್ದಾರೆ. ಇಡಿ, ಸಿಬಿಐ ಎಲ್ಲ ನಮಗೆ ಮಾತ್ರನಾ ? ಎಂದು ಪ್ರಶ್ನಿಸಿದರು.ಸಿಬಿಐ ನಮಗೆ ತೊಂದರೆ ಕೊಡ್ತಾ ಇದ್ದಾರೆ, ಆಡಳಿತ ಪಕ್ಷ ಬಿಜೆಪಿಯವರಿಗೆ ಯಾವುದು ಇಲ್ವಾ ? ಯಾವ ತನಿಖೆಯೂ ಇಲ್ಲ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಹಗರಣಗಳ ಬಗ್ಗೆ ಪುಸ್ತಕವನ್ನೇ ಬರೆಯಬಹುದು ಆದ್ರೆ ಅವರನ್ನು ವಿಚಾರಣೆ ಮಾಡ್ತಿಲ್ಲ ಎಂದರು. ಶಿವಮೊಗ್ಗ ಭದ್ರಾವತಿಯಲ್ಲಿ ರೈತರು ಬದುಕೋ ಹಾಗಿಲ್ಲ, ಬಿಜೆಪಿಯವರು ಎಲ್ಲ ಕಾರ್ಖಾನೆಗಳನ್ನು ಖಾಸಗೀಕರಣ ಮಾಡ್ತಾ ಇದ್ದಾರೆ ಸರ್ಕಾರ ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ, ಬೆಳೆಗಳಿಗೆ ಬೆಂಬಲ ನೀಡಿಲ್ಲ ಎಂದರು.
ಡಿಕೆಶಿ ಅಕ್ರಮ ಆಸ್ತಿ ಸಂಪಾದನೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಎರಡು ತಿಂಗಳ ಹಿಂದೆ ಡಿಕೆಶಿ ಒಡೆತನದ ಕಾಲೇಜಿನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಎರಡು ತಿಂಗಳು ನಿರಂತರವಾಗಿ ದಾಖಲೆಗಳನ್ನು ಪರಿಶೀಲಿಸಿ ಬಳಿಕ ಗ್ಲೋಬಲ್ ಕಾಲೇಜಿನಲ್ಲಿ ನಿರ್ದೇಶಕಿ ಆಗಿರುವ ಐಶ್ವರ್ಯಗೆ ನೋಟಿಸ್ ನೀಡಿದ್ದಾರೆ.