ಬೆಂಗಳೂರು: ಇಂದು ವಿಧಾನಸಭಾ ಎಲೆಕ್ಷನ್ ತೀರ್ಪು ಹೊರಬೀಳಲಿದೆ, ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮೇ 10 ಕ್ಕೆ ನಡೆದ ಎಲೆಕ್ಷನ್ ರಿಸಲ್ಟ್ ಇಂದು ಹೊರ ಬೀಳಲಿದೆ.
ರಾಜ್ಯದ ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇವಿಎಂ, ವಿವಿ ಪ್ಯಾಟ್ ಇರಿಸಲಾಗಿರುವ ಎಲ್ಲ ಸ್ಟ್ರಾಂಗ್ ರೂಂಗಳಲ್ಲಿ ಪೊಲೀಸರೊಂದಿಗೆ ಅರೆಸೇನಾ ಪಡೆಗಳು ಕಾದುಕುಳಿತಿವೆ, ಎಲ್ಲ ಕೇಂದ್ರಗಳಿಗೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ 200 ಮೀ ಪ್ರದೇಶದಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ. ಕ್ಷೇತ್ರಕ್ಕೆ ಅನುಗುಣವಾಗಿ ಮತ ಎಣಿಕೆ ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ, 2-3 ಟೇಬಲ್ ಗಳನ್ನು ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆಗೆ ಮೀಸಲಿಡಲಾಗುತ್ತದೆ,
ಎಣಿಕಾ ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ.ಘಟಾನುಘಟಿಗಳ ನಾಯಕರ ಭವಿಷ್ಯ ಹೊರಬೀಳಲಿದ್ದು, ಯಾರಿಗೆ ವಿಜಯದ ಹಾರ, ಯಾರಿಗೆ ಸೋಲು ಎಂಬುದು ಸದ್ಯದ ಕುತೂಹಲ, ಎಲ್ಲ ಪಕ್ಷದವರು ಟೆಂನ್ಶನ್‌ಲ್ಲಿದ್ದು, ಕಮಲ ಅರಳುತ್ತಾ ? ಕೈ ಕಮಾಲ್ ಮಾಡುತ್ತಾ ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.