Wednesday, May 31, 2023
spot_img
- Advertisement -spot_img

ಮತದಾನ ಅವಧಿ ಮುಕ್ತಾಯ : ಬಹುತೇಕ ಕಡೆ ಶಾಂತಿಯುತ ಮತದಾನ

ಬೆಂಗಳೂರು: ವಿಧಾನ ಸಭೆ ಚುನಾವಣೆ ಮತದಾನ ಅವಧಿ ಮುಕ್ತಾಯ ವಾಗಿದ್ದು, ಬಹುತೇಕ ಶಾಂತಿಯುತವಾಗಿ ಮತದಾನವಾಗಿದೆ. ರಾಜ್ಯದ 224 ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ರಿಂದ ಆರಂಭವಾಗಿದ್ದ ಮತದಾನ ಸಂಜೆ 6 ಗಂಟಗೆ ಮುಕ್ತಾಯವಾಗಿದೆ, ಬಹುತೇಕ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ,

ಮೇ 13 ರಂದು ಚುನವಣಾ ಫಲಿತಾಂಶ ಪ್ರಕಟವಾಗಲಿದೆ. ವಿಧಾನಸಭಾ ಚುನಾವಣಾ ಮತದಾನ ಮಧ್ಯಾಹ್ನ 3 ಗಂಟೆವರೆಗೂ ಬೆಂಗಳೂರು ಕೇಂದ್ರ 40.69, ಬೆಂಗಳೂರು ಉತ್ತರ 41.19 ರಷ್ಟು ಬೆಂಗಳೂರು ದಕ್ಷಿಣ ಶೇ. 40. 28 ರಷ್ಟು ಬೆಂಗಳೂರು ನಗರ ಶೇ. 41. 82 ರಷ್ಟು ಬೆಂಗಳೂರು ಗ್ರಾಮಾಂತರ ಶೇ. 60.14 ರಷ್ಟು ನಡೆದಿದೆ. ಸಂಜೆ 5 ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಶೇಕಡ 50.91% ಮತದಾನವಾಗಿದ್ದು, ಮತಚಲಾವಣೆಗೆ 50 ನಿಮಿಷ ಮಾತ್ರ ಉಳಿದಿದೆ. ಸಿಲಿಕಾನ್ ಸಿಟಿ ಜನರ ನಿರಾಸಕ್ತಿ ಈ ಬಾರಿ ಶೇಕಾಡವಾರು ಮತದಾನ ಕಡಿಮೆ ಆಗಿದೆ.

ಬೆಂಗಳೂರು ಉತ್ತರ ಶೇಕಡ 50.20% ಮತದಾನ,ಬೆಂಗಳೂರು ದಕ್ಷಿಣ 48.42% ಮತದಾನವಾಗಿದೆ, ಬೆಂಗಳೂರು ಸೆಂಟ್ರಲ್ 51.20% ಮತದಾನವಾಗಿದೆ ಬೆಂಗಳೂರು ಅರ್ಬನ್ 52.81% ಮತದಾನವಾಗಿದೆ ರಾಜ್ಯಾದ್ಯಂತ ಗುಪ್ತವಾಗಿ ಮತದಾನ ಮಾಡಬೇಕು ಎಂಬ ನಿಯಮವಿದ್ದರೂ ಹಲವು ಯುವಕರು ಮತದಾನ ಮಾಡಿದ ವಿಡಿಯೋ ಫೋಟೋಗಳನ್ನು ಹಂಚಿಕೊಂಡಿರೋದು ಘಟನೆ ನಡೆದಿದೆ. ಮತದಾನದ ಮಧ್ಯೆ ಸಣ್ಣ-ಪುಟ್ಟ ಜಗಳ ನಡೆದದ್ದು ಬಿಟ್ಟರೆ, ಬಹುತೇಕ ಕಡೆ ಶಾಂತಿಯಿಂದ ಮತ ಚಲಾಯಿಸಲಾಗಿದೆ.

Related Articles

- Advertisement -

Latest Articles