ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರ ಮನೆಗೆ ದೀಪಾವಳಿಯ ದೀಪಾಲಂಕಾರಕ್ಕೆ ಅಕ್ರವಾಗಿ ವಿದ್ಯುತ್ ಸಂಪರ್ಕ ಪಡೆದ ವಿಚಾರ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.
ವಿದ್ಯುತ್ ಕಳ್ಳತನ ಎಂಬ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ವಿವಿಧ ರೀತಿಯಲ್ಲಿ ಕುಮಾರಸ್ವಾಮಿಯವರ ಕಾಳೆಲೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿಯ ಕಾಂಪೌಂಡ್‌ಗೆ ‘ವಿದ್ಯುತ್ ಕಳ್ಳ’ ಎಂಬ ಪೋಸ್ಟರ್ ಅಂಟಿಸಿ ತಿರುಗೇಟು ನೀಡಿದ್ದಾರೆ.


ಜೆಡಿಎಸ್ ಭವನದ ಕಾಂಪೌಂಡ್‌ನಲ್ಲಿ ಕುಮಾರಸ್ವಾಮಿಯವರನ್ನು ಗುರಿಯಾಗಿಸಿ, ವಿದ್ಯುತ್ ಕಳ್ಳ ಹೆಚ್.ಡಿ ಕುಮಾರಸ್ವಾಮಿ, ಕರೆಂಟ್ ಕದ್ದರೂ ಹೆಚ್.ಡಿಕೆ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು, ಕುಮಾರಸ್ವಾಮಿಯವರೇ 200 ಯೂನಿಟ್ ಉಚಿತವಾಗಿದೆ. ನೆನಪಿಟ್ಟುಕೊಳ್ಳಿ ಹೆಚ್ಚು ಕದಿಯಬೇಡಿ” ಹೀಗೆ ವಿಧ ವಿಧ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.


ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಭವನದ ಕಾಂಪೌಂಡ್‌ನಲ್ಲಿ ಪೋಸ್ಟರ್ ಅಂಟಿಸಿರುವ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ವಿದ್ಯುತ್ ಕಳವು ಆರೋಪ: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್
ಹೆಚ್‌ಡಿಕೆ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ವಿಡಿಯೋ ನಿನ್ನೆ (ನ.14) ವೈರಲ್ ಆಗಿತ್ತು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಕಾಂಗ್ರೆಸ್, ಕುಮಾರಸ್ವಾಮಿಯನ್ನು ವಿದ್ಯುತ್ ಕಳ್ಳ ಎಂದು ಕಾಳೆಲೆದಿತ್ತು. ಹೆಚ್‌ಡಿಕೆ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿಚಾರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, “ನಾನು ಬಿಡದಿಯ ತೋಟದ ಮನೆಯಲ್ಲಿ ಇದ್ದೆ. ಬೆಂಗಳೂರಿನ ಜೆಪಿ ನಗರದ ಮನೆಗೆ ಬಂದಾಗ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವುದು ಗಮನಕ್ಕೆ ಬಂತು. ನಾನು ತಕ್ಷಣ ಅದನ್ನು ತೆರವುಗೊಳಿಸಿದ್ದೇನೆ. ಡೆಕೋರೇಶನ್‌ನವರಿಂದ ಅಚಾತುರ್ಯ ನಡೆದಿದೆ. ಎಷ್ಟು ದಂಡ ಹಾಕ್ತಾರೋ ಕಟ್ತೀನಿ” ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.