Monday, December 11, 2023
spot_img
- Advertisement -spot_img

ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ : ಎಂ ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರ ನಿರ್ಮಾಣಕ್ಕೆ ಎಂಜಿನಿಯರ್‌ಗಳ ಕೊಡುಗೆಯನ್ನು ಶ್ಲಾಘಿಸಿ ದೇಶದ ಎಲ್ಲ ಇಂಜಿನಿಯರ್ ಗಳಿಗೆ ಶುಭ ಕೋರಿದ್ದಾರೆ.

ಇಂಜಿನಿಯರ್ ಮತ್ತು ಆಡಳಿತಗಾರ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ‘ನ್ಯಾಷನಲ್ ಇಂಜಿನಿಯರ್ಸ್’ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಭಾರಿಯ ಇಂಜಿನಿಯರ್ ದಿನದಂದು ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಅವರ ನವೀನ ಮನಸ್ಸು ಮತ್ತು ದಣಿವರಿಯದ ಸಮರ್ಪಣೆ ನಮ್ಮ ರಾಷ್ಟ್ರದ ಪ್ರಗತಿಯ ಬೆನ್ನೆಲುಬು ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : ಚೈತ್ರಾ ಕುಂದಾಪುರ ಕುಸಿದು ಬೀಳಲು ಕಾರಣವೇನು?

ಈ ಬಗ್ಗೆ ಟ್ವಿಟ್ ಮಾಡಿದ ಪ್ರಧಾನಿ ಮೋದಿಯವರು “ಕಷ್ಟಪಟ್ಟು ದುಡಿಯುವ ಎಲ್ಲ ಇಂಜಿನಿಯರ್‌ಗಳಿಗೆ, ಇಂಜಿನಿಯರ್‌ ದಿನದ ಶುಭಾಶಯಗಳು. ಸರ್ ಎಂ ವಿಶ್ವೇಶರಯ್ಯ ಅವರ ನಾವಿನ್ಯತೆಯ ಮನಸ್ಸು ಮತ್ತು ದಣಿವರಿಯದ ಸಮರ್ಪಣೆ ನಮ್ಮ ರಾಷ್ಟ್ರದ ಪ್ರಗತಿಯ ಬೆನ್ನೆಲುಬಾಗಿದೆ. ಮೂಲಸೌಕರ್ಯ ಅದ್ಭುತಗಳಿಂದ ಕೂಡಿದ ತಂತ್ರಜ್ಞಾನಗಳ ಪ್ರಗತಿಯವರೆಗೆ, ಅವರ ಕೊಡುಗೆಗಳು ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುತ್ತವೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Nipah Virus : ಕೇರಳದಲ್ಲಿ ಮತ್ತೆ ನಿಫಾ ವೈರಸ್ ಸೋಂಕು ಪತ್ತೆ : ರಾಜ್ಯದ ಜನತೆಗೆ ಎಚ್ಚರಿಕೆ ನೀಡಿದ ಆರೋಗ್ಯ ಸಚಿವ

ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸಿದ ಅವರು ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ದೂರದೃಷ್ಟಿಯ ಎಂಜಿನಿಯರ್ ಮತ್ತು ರಾಜನೀತಿಜ್ಞ ಎಂದು ಕರೆದಿದ್ದಾರೆ. ಅವರು ರಾಷ್ಟ್ರಕ್ಕೆ ಹೊಸತನ ಮತ್ತು ಸೇವೆ ಸಲ್ಲಿಸಲು ಯುವ ಪೀಳಿಗೆಗೆ ಈಗಲೂ ಸ್ಫೂರ್ತಿ ನೀಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles