ಬಾಗಲಕೋಟೆ: ಭವಾನಿ ರೇವಣ್ಣ ನಾನೇ ಕ್ಯಾಂಡಿಡೇಟ್ ಅಂತಿದ್ದಾರೆ. ಅವರಿಗೇನು ಪಕ್ಷ ಇಲ್ವಾ? ಹೇಳೋರು ಕೇಳೋರು ಇಲ್ವಾ? ಎಂದು ಮಾಜಿ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಸ್ಥಾನಮಾನಕ್ಕಾಗಿ ಇಂದು ಯಾರು ಎಲ್ಲಿ ಬೇಕಾದ್ರೂ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ. ಒಂದು ಕಡೆ ಅನಿತಾ ಕುಮಾರಸ್ವಾಮಿ ಅವರ ಮಗನನ್ನ ಚುನಾವಣಾ ಅಭ್ಯರ್ಥಿ ಅಂತಾ ಘೋಷಣೆ ಮಾಡ್ತಾರೆ.
ಅವರವರೇ ತಮ್ಮನ್ನ, ತಮ್ಮ ಮಕ್ಕಳನ್ನ ಘೋಷಣೆ ಮಾಡಿದ್ರೆ ಹೇಗೆ? ಹೀಗಾದ್ರೆ ಒಂದು ಪಕ್ಷ ಅಂತಾ ಯಾಕೆ ಇರಬೇಕು? ಚುನಾವಣೆ ಸಮಿತಿ ಯಾಕೆ ಬೇಕು? ಇದು ಒಳ್ಳೆಯ ಬೆಳವಣಿಗೆ ಅಲ್ಲ, ಬಿಜೆಪಿಯಲ್ಲಿ ಇಂತಹ ವ್ಯವಸ್ಥೆ ಇಲ್ಲ. ಪಾರ್ಟಿ ಗುರುತಿಸಿ ಟಿಕೆಟ್ ನೀಡುತ್ತೇ ಎಲ್ಲರೂ ಶ್ರಮಿಸಿ ಗೆಲ್ಲುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಜೆಡಿಎಸ್ , ಕಾಂಗ್ರೆಸ್ ಪಕ್ಷ ಸೋಲಿಸಬೇಕೆಂದು ಹೋರಾಡುತ್ತಿರುವ ಬಿಜೆಪಿ ನಾಯಕರು ದೊಡ್ಡ ಗೌಡರ ಸೊಸೆಗೆ ಟಿಕೇಟ್ ಕೊಡುತ್ತೇವೆ ಅಂದಿರೋದು ಕುತೂಹಲಕ್ಕೆ ಕಾರಣವಾಗಿದೆ. ನನಗ್ಯಾಕೆ? ನಮ್ಮೂರು ಇಲ್ವಾ…? ನಮ್ಮೂರ ಜನ ನನಗೆ ತಂದೆ ತಾಯಿ ಇದ್ದಂಗೆ.
6 ಚುನಾವಣೆಗಳಲ್ಲಿ 5 ಸಲ ಗೆಲ್ಲಿಸಿದ್ದಾರೆ. ಗೆಲ್ಲಿಸಿದವರಿಗೆ ದ್ರೋಹ ಮಾಡಿ ಬೇರೆ ಕ್ಷೇತ್ರಕ್ಕೆ ಬರಲೇನು? ಅಲ್ಲಿ ಸೋತೆ, ಅಲ್ಲಿಯೇ ಗೆದ್ದೆ ಇದು ರಾಜಕಾರಣದಲ್ಲಿ ಇರಬೇಕು ಎಂದು ಬಾದಾಮಿ ಕ್ಷೇತ್ರ ಬಿಟ್ರು, ನೀವೇನಾದ್ರೂ ಬಾದಾಮಿಗೆ ಬರ್ತಿರಾ? ಎಂಬ ಪ್ರಶ್ನೆಗೆ ಉತ್ತರಿಸಿದರು ಸಿದ್ದರಾಮಯ್ಯ ಕ್ಷೇತ್ರವಿಲ್ಲದೇ ಪರದಾಡುತ್ತಿರೋದಕ್ಕೆ ವ್ಯಂಗ್ಯವಾಡಿದರು.