ಶಿವಮೊಗ್ಗ: ಹುಲಿ ಕಾಣಲಿಲ್ಲ ಎನ್ನುವುದಕ್ಕೂ ಟೀಕೆ, ಅಕಸ್ಮಾತ್ ಒಂದು ಹುಲಿ ಕಂಡಿದ್ದರೆ ಒಂದೇ ಕಾಣಿಸಿದೆ ಎಂದು ಕಾಂಗ್ರೆಸ್ ನವ್ರು ಟೀಕೆ ಮಾಡುತ್ತಿದ್ದರು ಎಂದು ಕೆ ಎಸ್ ಈಶ್ವರಪ್ಪ ಆಕ್ರೋಶಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ರಾಷ್ಟ್ರದ ಬಿಜೆಪಿ ನಾಯಕರು ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಬರ್ತಿರೋದು ಕೈ ಪಕ್ಷಕ್ಕೆ ಭಯ ತಂದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಯಾವುದೇ ಲಕ್ಷಣಗಳಿಲ್ಲ ಹಾಗಾಗಿ ಟೀಕೆಯಲ್ಲಿ ತೊಡಗಿದ್ದಾರೆ ಎಂದು ಚಾಟಿ ಬೀಸಿದ್ದಾರೆ.
ಬಂಡೀಪುರದಲ್ಲಿ ನರೇಂದ್ರ ಮೋದಿಯವರಿಗೆ ಹುಲಿ ಕಾಣಲಿಲ್ಲ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಆದರೆ ಮೋದಿ ಇಡೀ ವಿಶ್ವಕ್ಕೆ ಹುಲಿ, ಅಂತಹ ಹುಲಿಯ ನೇತೃತ್ವದಲ್ಲಿ ದೇಶ ಸಾಗುತ್ತಿರುವುದು ನಮ್ಮ ಪುಣ್ಯ ಎಂದರು.ದೇಶ ಹಾಗೂ ವಿಶ್ವ ಮೆಚ್ಚಿದ ನಾಯಕರು ಬಿಜೆಪಿಯಲ್ಲಿದ್ದು, ವಿಶ್ವ ನಾಯಕ ನರೇಂದ್ರ ಮೋದಿ ನಮ್ಮ ನಾಯಕರಾಗಿರುವುದು ನಮ್ಮ ಹೆಮ್ಮೆ ಎಂದರು.
ಯಡಿಯೂರಪ್ಪ , ಬೊಮ್ಮಾಯಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ಇದ್ದು ರಾಜ್ಯದಲ್ಲಿ ಬಿಜೆಪಿಗೆ ಈ ಬಾರಿ ಪೂರ್ಣ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.