ಚಿಕ್ಕಮಗಳೂರು : ದತ್ತಪೀಠದ ಎಲ್ಲಾ ಬೇಲಿಗಳಿಂದ ನಾವು ಹೊರ ಬರಬೇಕು, ಅದು ನಮ್ಮ ಆಸೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಭಜರಂಗದಳ, ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ಹೋಮ ಹುಣ್ಣಿಮೆ ಪೂಜೆ ಪ್ರಯುಕ್ತ ನಡೆದ ಹೋಮದಲ್ಲಿ ಶೋಭಾ ಭಾಗಿಯಾಗಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಎಲ್ಲಾ ಬೇಲಿಗಳು ನಿವಾರಣೆಯಾಗಬೇಕು, ಅದು ನಮ್ಮ ಅಪೇಕ್ಷೆ, ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ, ಹೀಗಾಗಿ ನಮ್ಮ ಸಂಕಲ್ಪ ಈಡೇರಲಿ ಅಂತ ದತ್ತನನ್ನ ಪ್ರಾರ್ಥೀಸಿದ್ದೇವೆ ಎಂದರು.
ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಕೇಸ್; ಡಿಕೆಶಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ದತ್ತ ಪಾದುಕೆ ಆರಾಧನೆಯಿಂದ ಎಲ್ಲರಿಗೂ ಖುಷಿಯಾಗಿದೆ, ದತ್ತಪೀಠದಲ್ಲಿ ಈ ಪೂಜೆ ನಿರಂತರವಾಗಿ ನಡೆಯಬೇಕು, ದತ್ತಾತ್ರೇಯರಿಗೆ ತ್ರಿಕಾಲ ಪೂಜೆ ಆಗಬೇಕು, ಅದು ನಮ್ಮ ಅಪೇಕ್ಷೆ, ದತ್ತಪೀಠದ ದಶಕಗಳ ಹೋರಾಟಕ್ಕೆ ನಮ್ಮ ಸರ್ಕಾರದಲ್ಲಿ ಜಯ ಸಿಕ್ಕಿದೆ ಎಂದು ಸಂತಸಪಟ್ಟರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.