Wednesday, May 31, 2023
spot_img
- Advertisement -spot_img

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

ಬೆಂಗಳೂರು : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪ ಭಾಷಣದ ಬಗ್ಗೆ ಇಂಗ್ಲಿಷ್‌ ಮತ್ತು ಕನ್ನಡ ಎರಡು ಭಾಷೆಯಲ್ಲೂ ಟ್ವೀಟ್‌ ಮಾಡಿದ್ದಾರೆ. ಇನ್ನು ಪ್ರಧಾನಿಗಳ ಟ್ವೀಟ್‌ಗೆ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಧಾನಿಯವರ ಶ್ಲಾಘನೆಗೆ ಯಡಿಯೂರಪ್ಪನವರು ಧನ್ಯವಾದಗಳನ್ನು ಹೇಳಿದ್ದಾರೆ.

ಯಡಿಯೂರಪ್ಪನವರು ತಮ್ಮ ಭಾಷಣದಲ್ಲಿ ಪಕ್ಷವಾಗಲಿ, ಪ್ರಧಾನಿ ಮೋದಿಯವರಾಗಲಿ ನನ್ನನ್ನು ಎಂದಿಗೂ ಕಡೆಗಣಿಸಿಲ್ಲ. ನನಗೆ ನೀಡಿರುವ ಸ್ಥಾನ, ತೋರಿದ ಗೌರವಕ್ಕೆ ಮೋದಿ ಅವರಿಗೆ ನಾನು ಸದಾ ಋಣಿ ಎಂದು ಯಡಿಯೂರಪ್ಪ ವಿದಾಯದ ಭಾಷಣದಲ್ಲಿ ಹೇಳಿದ್ದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಭಾಷಣ ಬಿಜೆಪಿಯ ಕಾರ್ಯಕರ್ತನಾದ ನನಗೆ ಈ ಭಾಷಣ ಅತ್ಯಂತ ಸ್ಪೂರ್ತಿಯಾಗಿದೆ, ಇದರಲ್ಲಿ ನಮ್ಮ ಪಕ್ಷದ ನೈತಿಕತೆ ಅಡಕವಾಗಿದೆ, ಇದು ಕಾರ್ಯಕರ್ತರಿಗೂ ಸ್ಪೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ನನ್ನನ್ನು ಪಕ್ಷದಿಂದ ಕಡೆಗಣಿಸುತ್ತಿದೆ, ನನಗೆ ಅನ್ಯಾಯ ಮಾಡಿದೆ ಎಂದು ವಿರೋಧ ಪಕ್ಷದವರು ಸೇರಿದಂತೆ ಹಲವರು ಟೀಕಿಸುತ್ತಿದ್ದಾರೆ. ಆದರೆ, ಅದೆಲ್ಲ ನಿಜ ಅಲ್ಲ ಪಕ್ಷದವರು ಚೆನ್ನಾಗಿಯೇ ನೋಡಿಕೊಂಡಿದ್ದಾರೆ ಎಂದಿದ್ದ ರು. ಇನ್ಮುಂದೆ ಸದನಕ್ಕೆ ಪ್ರವೇಶಿಸುವುದಿಲ್ಲ, ಜೊತೆಗೆ ಎಲೆಕ್ಷನ್‌ ಗೂ ನಿಲ್ಲಲ್ಲ ಇದು ಒಂದು ರೀತಿಯ ವಿದಾಯದ ಭಾಷಣವಾಗಿದೆ ಎಂದಿದ್ದರು.

Related Articles

- Advertisement -

Latest Articles