ಕೊಡಗು: ಕನ್ನಡದ ನಟಿ ಹರ್ಷಿಕಾ ಪೂಣಚ್ಚ ತಮ್ಮ ಬಹುಕಾಲದ ಗೆಳೆಯ ಭುವನ್ ಪೊನ್ನಣ್ಣ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೊಡವ ಸಂಪ್ರದಾಯದಂತೆ ಇಂದು ವಿವಾಹ ನಡೆಯುತ್ತಿದೆ. ವಿರಾಜಪೇಟೆಯಲ್ಲಿ ಇಬ್ಬರ ವಿವಾಹ ನಡೆಯುತ್ತಿದ್ದು ಹತ್ತಾರು ಗಣ್ಯರು ಭಾಗಿಯಾಗಿದ್ದಾರೆ.
ವಿವಾಹದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಸುಧಾಕರ್ ಭಾಗಿಯಾಗಿದ್ದಾರೆ. ಇವರ ಜೊತೆ ಚಿತ್ರರಂಗದ ಗಣ್ಯರು ಸಹ ಭಾಗಿಯಾಗಿದ್ದಾರೆ. ನಟ ಗೋಲ್ಡನ್ ಸ್ಟಾರ್ ಗಣೇಶ್, ನಟಿ ಅನು ಪ್ರಭಾಕರ್-ರಘು ಮುಖರ್ಜಿ ಭಾಗಿಯಾಗಿದ್ದಾರೆ.


ಇದನ್ನೂ ಓದಿ: ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಆಯನೂರು ಮಂಜುನಾಥ್!
2012ರಿಂದಲೂ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಪ್ರೀತಿಸುತ್ತಿದ್ದರು. ಪ್ರೀತಿಗೆ ಎರಡೂ ಕುಟುಂಬದವರ ಒಪ್ಪಿಗೆ ನೀಡಿ ಈಗ ವಿವಾಹ ನಿಶ್ಚಯ ಮಾಡಿದ್ದಾರೆ.


ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.