ಶಿವಮೊಗ್ಗ : ಕಾಂಗ್ರೆಸ್‌ನಲ್ಲಿ ಭೂಕಂಪ ಆಗೋ ಎಲ್ಲಾ ಮುನ್ಸೂಚನೆ ಕಾಣುತ್ತಿದ್ದು, ಕಾಂಗ್ರೆಸ್ಸಿಗರೇ ಈ ರೀತಿ ನಿಜ ಹೊರ ತರುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗುಡುಗಿದ್ದಾರೆ.
ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರಿಪ್ರಸಾದ್ ಚೆನ್ನಾಗಿ ಮಾತನಾಡಿದ್ದಾರೆ. ಹರಿಪ್ರಸಾದ್ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕನ ಕೆಲಸ ಮಾಡಿದ್ದಾರೆ. ಹಿಂದುಳಿದ ವರ್ಗದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ, ಕಾಂಗ್ರೆಸ್ ನಲ್ಲಿ ಅತ್ಯಂತ ಪ್ರಮುಖರಾಗಿ ಗುರುತಿಸಿಕೊಂಡ ನಾಯಕರಾಗಿದ್ದಾರೆ ಎಂದರು.
ಇಂದಿರಾಗಾಂಧಿ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದಂತರವರು ಅವರು ಇದೀಗ ಒಳಕುದಿಯನ್ನ ತೋಡಿ ಕೊಳ್ತಿದ್ದಾರೆ, ಅವರ ಪಕ್ಷ ಹಳ್ಳ ಹಿಡಿಯುವ ಸೂಚನೆಗಳು ಕಾಣಿಸ್ತಾ ಇದೆ, ಸಿದ್ದರಾಮಯ್ಯ ನಡವಳಿಕೆ ಪಕ್ಷ ಯಾವ ಕಡೆ ಹೋಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಇನ್ನು ಕೂಡ ಸಂಪೂರ್ಣವಾಗಿ ತಿಳಿದು ಬಂದಿಲ್ಲ, ನಮ್ಮ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ, ಮೈತ್ರಿ ಆದರೆ ಒಳ್ಳೆಯದು, ಭ್ರಷ್ಟ ಹಾಗೂ ಕೆಟ್ಟ ಕಾಂಗ್ರೆಸ್ಸನ್ನು ದೂರ ಮಾಡಲು ಒಳ್ಳೆಯದಾಗುತ್ತೆ ಎಂದರು.
ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ದೇಶವನ್ನು ಟೀಕೆ ಮಾಡುತ್ತಿದ್ದಾರೆ, ದೇಶ ವಿರೋಧಿ ಮಾತುಗಳನ್ನ ಅಲ್ಲಿ ಹೋಗಿ ಆಡುತ್ತಿದ್ದಾರೆ, ಇಂಥವರು ಒಂದು ದಿನ ಅಧಿಕಾರದಲ್ಲಿರುವುದು ಕೂಡ ಅಪಾಯ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಸ್ವಾಗತಿಸುತ್ತೇನೆ : ಸುನೀಲ್ ಕುಮಾರ್
ಒಂದು ಕಡೆ ಪ್ರಧಾನಿ ಮೋದಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಭಾರತ ಎಷ್ಟು ಬಲಿಷ್ಠ ಎಂದು ಜಗತ್ತಿಗೆ ಹೇಳುವ ಕೆಲಸ ಮಾಡುತ್ತಿದ್ದಾರೆ, ಇದ್ರ ನಡುವೆ ಆಗಾಗ ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಮಾತನಾಡೋ ಕೆಲಸ ರಾಹುಲ್ ಮಾಡುತ್ತಿದ್ದಾರೆ, ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಪ್ರಹಾರ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಇವರಿಂದಲೇ ದೇಶದ ಕೀರ್ತಿಗೆ ಭಂಗ ಉಂಟಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.