Sunday, September 24, 2023
spot_img
- Advertisement -spot_img

‘ಮುಖ್ಯಮಂತ್ರಿ ಆಗಿದ್ದಾಗ ಜಗದೀಶ್ ಶೆಟ್ಟರ್ ಯಾವ ಬಕೆಟ್ ಹಿಡಿದಿದ್ರು?’

ಶಿವಮೊಗ್ಗ : ಬಿಜೆಪಿಯಲ್ಲಿ ಒಂದು ಕೋಟಿಗೂ ಅಧಿಕ ಜನ ಸದಸ್ಯರಿದ್ದಾರೆ, ಎಲ್ಲರಿಗೂ ಸ್ಥಾನ ನೀಡಲು ಆಗುವುದಿಲ್ಲ. ಸುಕುಮಾರಶೆಟ್ಟಿ ಒಂದು ಬಾರಿ ಎಂಎಲ್ ಎ ಆಗಿದ್ದಾರೆ. ಶಾಸಕರಾಗದಿರುವವರು ಸಾಕಷ್ಟು ಕಾರ್ಯಕರ್ತರಿದ್ದಾರೆ. ಎಲ್ಲಾ ಅಧಿಕಾರ ತಮಗೆ ಬೇಕು ಎನ್ನುವುದು ತಪ್ಪು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿಯ ಮಾಜಿ ಶಾಸಕ ಸುಕುಮಾರ ಶೆಟ್ಟಿ ಬಿಜೆಪಿ ಪಕ್ಷ ಬಿಟ್ಟಿರುವ ವಿಚಾರಕ್ಕೆ ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸುಕುಮಾರ್ ಬಿಜೆಪಿ ಬಿಟ್ಟ ಕಾರಣ ತಿಳಿಸಲಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : G20 ಶೃಂಗಸಭೆ ವೇದಿಕೆಯಲ್ಲೂ ರಾರಾಜಿಸಿದ ‘ಭಾರತ್’

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದವರು, ಅವರಿಗೆ ಈ ಬಾರಿ ಸ್ಥಾನ ಸಿಗಲಿಲ್ಲ ಅದಕ್ಕೆ ಬಕೆಟ್ ಹಿಡಿಯುವವರಿಗೆ ಮಾತ್ರ ಸ್ಥಾನ ಎಂದು ಆರೋಪ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಯಾವ ಬಕೆಟ್ ಹಿಡಿದಿದ್ದರು? ತಮ್ಮ ಯಾವ ಬಕೆಟ್ ಹಿಡಿದು ಎಂಎಲ್ ಸಿ ಆಗಿದ್ದರು? ನನಗೆ ಅವಕಾಶ ಸಿಕ್ಕರೆ ಬಿಜೆಪಿ ಒಳ್ಳೆಯದು, ಅವಕಾಶ ಸಿಗದಿದ್ದಾಗ ಪಕ್ಷವನ್ನು ದೂಷಿಸುವುದು, ಸರ್ವಾಧಿಕಾರಿ ಪಕ್ಷ ಎಂದು ಆರೋಪ ಮಡುವುದು ಅವರ ಮನೋದೌರ್ಬಲ್ಯವನ್ನು ತೋರಿಸುತ್ತದೆ ಎಂದು ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಸರಕಾರವೇ ಇಲ್ಲ. ಬೆಳೆ ಪರಿಹಾರ ಕೊಡಿ ಎಂದು ರೈತರು ಕೇಳುತ್ತಿದ್ದಾರೆ. ಈಗಾಗಲೇ 139 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಿ ಎಂದು ಕೇಳಿದರೆ, ಅವರು ವೈಯಕ್ತಿಕವಾಗಿ, ಲವ್ ಮಾಡಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವುದು ಬೇರೆ ಬೇರೆ ಸಮಸ್ಯೆಗೆ, ಇದಕ್ಕೆಲ್ಲಾ ಪರಿಹಾರ ಕೊಡುವುದಿಲ್ಲ ಎಂದು ರೈತರ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುವ ಮಂತ್ರಿಯನ್ನು ನೋಡಿಯೇ ಇಲ್ಲ ಎಂದು ಟೀಕಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ರೈತರಿಗೆ ಮೊದಲು ಪರಿಹಾರ ಕೊಡಿ, ಬೆಳೆ ಪರಿಹಾರ, ಬರಗಾಲ ಘೋಷಣೆ ಮಾಡುತ್ತಿಲ್ಲ. ಬರಗಾಲ ಘೋಷಣೆ ಮಾಡದೇ ಕಾಲ ಕಳೆಯುತ್ತಿದ್ದಾರೆ. ಪರಿಹಾರ ಘೋಷಣೆ ಮಾಡದೇ ನಾಳೆ ಬಾ ಎನ್ನುವಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ ಎಂದು ಕೆಂಡ ಕಾರಿದ್ದಾರೆ.

ಇದನ್ನೂ ಓದಿ : ಜೆಡಿಎಸ್-ಬಿಜೆಪಿ ಮೈತ್ರಿ; ಕಾಂಗ್ರೆಸ್ ನಿರ್ನಾಮಕ್ಕಾಗಿ ನಾವು ಒಂದಾಗಿದ್ದೇವೆ : ಈಶ್ವರಪ್ಪ

ಜಿಲ್ಲಾ ಉಸ್ತುವಾರಿ ಸಚಿವರು‌ ಜನರ ಸಂಕಷ್ಟ ಕೇಳುತ್ತಿಲ್ಲ. ರೈತರಿಗೆ ಧೈರ್ಯ ತುಂಬುತ್ತಿಲ್ಲ, ಮುಂದೆ ಇವರು ಯಾರು ಮಂತ್ರಿ ಆಗುವುದಿಲ್ಲ. ಇವರ ಸರಕಾರವೂ ಬರುವುದಿಲ್ಲ. ರೈತರ ಶಾಪ ಈ ಸರಕಾರಕ್ಕೆ ತಟ್ಟಲಿದೆ ಎಂದು ಹರಿಹಾಯ್ದಿದ್ದಾರೆ.

ಯಾವ ದೇಶಭಕ್ತ ಎದೆಯುಬ್ಬಿಸಿ ‘ಭಾರತ್ ಮಾತಾ ಕೀ ಜೈ’ ಎಂದು ಹೇಳುತ್ತಾರೋ ಅವರು ಖುಷಿ ಪಡುತ್ತಾರೆ. ಯಾವ ವಿದೇಶಿ ವ್ಯಕ್ತಿಗಳು ‘ಇಂಡಿಯಾ’ ಎಂದು ಹೆಸರು ಇಟ್ಟಾಗ ಸಂತೋಷ ಪಟ್ಟಿದ್ದರೋ ಅವರು ಇಂಡಿಯಾ ಎಂದು ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಹುಟ್ಟಿ ಸನಾತನ ಧರ್ಮದಲ್ಲಿ ಹುಟ್ಟಿದ್ದೇವೆ ಎನ್ನುವುದೇ ನಮಗೆ ಹೆಮ್ಮೆ, ಬ್ರಿಟನ್ ಪ್ರಧಾನಮಂತ್ರಿ ಸಹ ನಾನು ಹಿಂದೂ ಧರ್ಮೀಯ ಎನ್ನಲು ಖುಷಿಯಾಗುತ್ತದೆ ಎಂದಿದ್ದಾರೆ. ಇಂಡಿಯಾದಲ್ಲಿರುವವರು ಸನಾತನ ಧರ್ಮದ ಬಗ್ಗೆ ಮಾತನ್ನು ಟೀಕಿಸಿದ್ದಾರೆ. ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದವರಿಗೆಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles