ಶಿರಸಿ: ‘ಕಾಂಗ್ರೆಸ್ ತಟ್ಟೆಯಲ್ಲಿ ಉಣ್ಣುವವರಿಗೆ ಸ್ವಾಗತ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್‌ನವರ ಹಸಿವಿನ ಇತಿಹಾಸ ನಾಡಿನ ಜನತೆಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕರು ಅಂತವರ ತಟ್ಟೆಯಲ್ಲಿರುವ ಊಟಕ್ಕೆ ಕೈಹಾಕುವುದಿಲ್ಲ. ಕಾಂಗ್ರೆಸ್ ಪಕ್ಷದವರು ಹಸಿವಾದಾಗ ಯಾರ ಮನೆ ಬಾಗಿಲು ತಟ್ಟಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತು. ಈಗ ಸಚಿವ ಸ್ಥಾನದಲ್ಲಿರುವ ಮಧು ಬಂಗಾರಪ್ಪ ಅವರ ಪೂರ್ವ ಇತಿಹಾಸವೂ ನಮ್ಮೆಲ್ಲರ ಎದುರಿಗೆ ಇದೆ ಎಂದು ವ್ಯಂಗ್ಯ ಮಾಡಿದರು.
ಇದನ್ನೂ ಓದಿ: ‘ಕಾಲೇಜು ಶುರು ಮಾಡದಿದ್ರೆ ಮಕ್ಕಳೆಲ್ಲ ಎಣ್ಣೆ ಅಂಗಡಿಗೆ ಹೋಗ್ತಾರೆ’ : ರೇವಣ್ಣ
ಮಧು ಬಂಗಾರಪ್ಪ ಅವರ ಹೇಳಿಕೆ ಗಮನಿಸಿದರೆ, ಜೆಡಿಎಸ್‌ನಿಂದ ಹೊರ ನಡೆದು ಕಾಂಗ್ರೆಸ್ ತಟ್ಟೆಯ ಊಟ ಮಾಡಿದ ಸ್ವಂತ ಅನುಭವದ ಮಾತು ಹೇಳಿದಂತಿದೆ ಎಂದೂ ಕಾಗೇರಿ ವ್ಯಂಗ್ಯವಾಡಿದರು.
ಬಿಜೆಪಿಯ ಯಾವುದೇ ಶಾಸಕರು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಲ್ಲೇ ಇರುತ್ತಾರೆ. ಈ ಬಗ್ಗೆ ಸುದೀರ್ಘ ಚರ್ಚೆ ನಮ್ಮಲ್ಲಿ ನಡೆದಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.