Thursday, September 28, 2023
spot_img
- Advertisement -spot_img

ಜಿ-20 ಶೃಂಗ ಸಭೆಯಲ್ಲಿ ಕೃಷ್ಣದೇವರಾಯರ ಬಗ್ಗೆ ವಿವರಣೆ

ನವದೆಹಲಿ : ಸದ್ಯ ಎಲ್ಲರ ಚಿತ್ತ ರಾಷ್ಟ್ರ ರಾಜಧಾನಿ ದೆಹಲಿಯತ್ತ ನೆಟ್ಟಿದೆ. ಸೆಪ್ಟೆಂಬರ್ 9 ಹಾಗೂ 10 ರಂದು ಜಿ-20 ಶೃಂಗ ಸಭೆಯ ಸಮಾವೇಶ ನವದೆಹಲಿಯಲ್ಲಿ ನಡೆಯಲಿದ್ದು, ಭಾರತ ಜಾಗತಿಕ ನಾಯಕರನ್ನು ಸ್ವಾಗತಿಸಲು ಸಜ್ಜಾಗಿದೆ.

ಇದನ್ನೂ ಓದಿ: ಆರು ವರ್ಷ ಕಳೆದರೂ ಆರದ ‘ಗೌರಿ’ ನೆನಪು

ಈ ಕಾರ್ಯಕ್ರಮದಲ್ಲಿ ಹಲವಾರು ಪ್ರದರ್ಶನಗಳು ನಡೆಯಲಿದ್ದು, ಈ ನಿಟ್ಟಿನಲ್ಲಿ ದೆಹಲಿಯಲ್ಲಿ ವಿವಿಧ ಪ್ರದರ್ಶದ ಪುನರಾಭ್ಯಾಸ ನಡೆಯುತಿದೆ. ಶೃಂಗಸಭೆಯ ಅಂಗವಾಗಿ ಕೇಂದ್ರ ಸಂಸ್ಕೃತಿ ಇಲಾಖೆಯು ‘ಮದರ್ ಆಫ್ ಡೆಮಾಕ್ರಸಿ’ ಹೆಸರಿನ ಒಂದು ಪ್ರದರ್ಶವನ್ನು ಆಯೋಜಿಸಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ನೃತ್ಯಗಾರ್ತಿಯ ಪ್ರತಿಮೆ, ಎ ಐ ( ಕೃತಕ ಬುದ್ದಿಮತ್ತೆ) ನಿರೂಪಕಿಯನ್ನು ಕಾಣಬಹುದು. ಇಲ್ಲಿ ಭಾರತದ ಇತಿಹಾಸವನ್ನು ಬಿಂಬಿಸಲಾಗುತ್ತದೆ. ಕರ್ನಾಟಕಕ್ಕೆ ಸಂಬಂಧಿಸಿದ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯರ ಸಾಧನೆಯ ಬಗ್ಗೆ, ದೇಶಕ್ಕೆ ಅವರ ಕೊಡುಗೆಯ ಬಗ್ಗೆ ಹೇಳಲಾಗುತ್ತದೆ.

ಇದನ್ನೂ ಓದಿ: 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು. ಕನ್ನಡ ನಾಡಿಗೆ ಎಲ್ಲ ಕ್ಷೇತ್ರದಲ್ಲಿಯೂ ಇವರ ಕೊಡುಗೆಯನ್ನು ನೋಡಬಹುದು. 

ವಿಜಯನಗರದ ಕೃಷ್ಣದೇವರಾಯ ಸೇರಿದಂತೆ  ಸಿಂಧೂ ಸರಸ್ವತಿ ನಾಗರಿಕತೆ, ವೈದಿಕ ಯುಗ, ರಾಮಾಯಣ, ಮಹಾಭಾರತ, ಮೌರ್ಯ ಸಾಮ್ರಾಜ್ಯ,  ಭಾರತದ ಇತಿಹಾಸಕ್ಕೆ ಸಾಕ್ಷಿ ನೀಡಿದ ಶಾಸನಗಳ ವಿವರಣೆಯು ಇರಲಿದೆ. ಒಟ್ಟಾರೆಯಾಗಿ ಭಾರತದ 7 ಸಾವಿರ ವರ್ಷಗಳ ಇತಿಹಾಸವನ್ನು ಇಲ್ಲಿ ತೆರೆದಿಡಲಾಗುತದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles