ಮಂಡ್ಯ : ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ನಿಲ್ಲಿಸಿದ್ದರೂ, ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಇಂದು ಶ್ರೀರಂಗಪಟ್ಟಣದಲ್ಲಿ ಧರಣಿ ನಡೆಯಲಿದ್ದು, ಬೆಳಿಗ್ಗೆ10:30ರಿಂದ 11:30ರವರೆಗೆ ತಮಟೆ ಚಳವಳಿ ಇರಲಿದೆ. ರೈತ ಹಿತರಕ್ಷಣಾ ಸಮಿತಿ ಹಾಗೂ ಭೂಮಿ ತಾಯಿ ಹೋರಾಟ ಸಮಿತಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿವೆ.
ನೀರು ನಿಲ್ಲಿಸಿದರೂ ಯಾಕೆ ಪ್ರತಿಭಟನೆ ? ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 75 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು. ಕಳೆದ 10 ದಿನದಲ್ಲಿ 62 ಸಾವಿರ ಕ್ಯೂಸೆಕ್ ನೀರು ಕೆಆರ್ ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿಸಲಾಗಿದೆ. ಪ್ರಾಧಿಕಾರ ಸೂಚಿಸಿದ ಕೋಟಾ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆ ಸರ್ಕಾರ ನೀರು ಬಿಡುವುದನ್ನು ಸ್ಥಗಿತಗೊಳಿಸಿದೆ.
ಇದನ್ನೂ ಓದಿ : ತಮಿಳುನಾಡಿಗೆ ‘ಕಾವೇರಿ’ ನೀರು ಹರಿಸುವುದನ್ನು ನಿಲ್ಲಿಸಿದ ಸರ್ಕಾರ
ಸರ್ಕಾರ ನೀರು ಹಾರಿಸುವುದನ್ನೂ ನಿಲ್ಲಿಸಿದರೂ, ಸೆಪ್ಟೆಂಬರ್ 12ರಂದು ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮತ್ತೆ ನೀರು ಹರಿಸಬೇಕಾ? ಇಲ್ಲ ಇದುವರೆಗೆ ಬಿಟ್ಟಿರುವ ನೀರು ಸಾಕಾ? ಎಂಬುವುದು ನಿರ್ಧಾರವಾಗಲಿದೆ. ಹಾಗಾಗಿ, ಸೆ.12ರವರೆಗೆ ಪ್ರತಿಭಟನೆ ಮುಂದುವರಿಸಲು ರೈತ ಸಂಘಟನೆಗಳು ತೀರ್ಮಾನಿಸಿದ್ದು, ಕಾವೇರಿ ಪ್ರಾಧಿಕಾರದ ಸಭೆಯ ತೀರ್ಮಾನ ನೋಡಿಕೊಂಡು ಹೋರಾಟ ಮುಂದುವರಿಸಬೇಕಾ? ಬೇಡ್ವಾ ಎಂಬುಬಿವುದನ್ನು ನಿರ್ಧರಿಸಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.