ಹಾಸನ: ಜಿಲ್ಲೆಯನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕಂದಾಯ ಮಂತ್ರಿಗಳು ಹೊಸದಾಗಿ ಏನ್ ಮಾಡ್ತಾವ್ರೆ ಮಾಡ್ಲಿ, ಎಕರೆಗೆ ಹತ್ತರಿಂದ ಹದಿನೈದು ಸಾವಿರ ಕೊಡುವಂತೆ ಒತ್ತಾಯ ಮಾಡಿದ್ದೇನೆ ಎಂದು ತಿಳಿಸಿದರು.
ಹಾಸನ ಏಳು ವಿಧಾನಸಭಾ ಕ್ಷೇತ್ರಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕು, ಹೇಮಾವತಿ ಹೊಳೆಯಿಂದ ಸುಮಾರು 18 ಟಿಎಂಸಿ ನೀರನ್ನು ಕೆ ಆರ್ ಎಸ್ ಡ್ಯಾಮ್ ಗೆ ದಿನನಿತ್ಯ ಬಿಡಲಾಗುತ್ತಿದೆ, ಹಾಸನ ಜಿಲ್ಲೆಯ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಹಲವಾರು ರೈತರು ಭತ್ತದ ಕೃಷಿ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಈದ್ಗಾ ಮೈದಾನ ಯಾವುದೇ ಒಂದು ಸಮುದಾಯಕ್ಕೆ ಸೇರಿದ್ದಲ್ಲ: ಪ್ರಲ್ಹಾದ್ ಜೋಷಿ
ಇನ್ನೂ ನಾಲ್ಕರಿಂದ ಐದು ದಿನಗಳಲ್ಲಿ ಕಾಲುವೆ ನೀರನ್ನು ನಿಲ್ಲಿಸುವುದರಿಂದ ಅವರಿಗೆ ನೀರಿನ ಕೊರತೆ ಉಂಟಾಗುತ್ತದೆ, ಸರ್ಕಾರ ಬಂದು ಸುಮಾರು ಮೂರು ತಿಂಗಳು ಆಯ್ತು, ಇದುವರೆಗೂ ನೀರಾವರಿಗೆ ಸಂಬಂಧಿಸಿದಂತೆ ಮೀಟಿಂಗ್ ಕರೆಯಲು ಸಾಧ್ಯವಾಗಿರುವುದಿಲ್ಲ, ರೈತರಿಗೆ ಬರ ಪರಿಹಾರ ಬೆಳೆ ಸಾಲವನ್ನು ಸರ್ಕಾರ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.