ಉತ್ತರ ಪ್ರದೇಶ: ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ದೇವಸ್ಥಾನದ ಅರ್ಚಕರೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ದಾಸನ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹನಾಥ್ ಸರಸ್ವತಿ ಅವರ ವಿರುದ್ಧ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಕಲಾಂ ಅವರ ಬಗ್ಗೆ ಅಸಂಬಂದ್ಧ ಪದಬಳಕೆ ಹಾಗೂ ಮುಸ್ಲಿಮರ ಕುರಿತು ಆಕ್ಷೇಪಾರ್ಹ ಅಂಶಗಳನ್ನು ಹೊಂದಿರುವ ವಿಡಿಯೋ ಹರಿದಾಡುತ್ತಿತ್ತು.
ಇದನ್ನೂ ಓದಿ : ಮೈತ್ರಿ ಬಗ್ಗೆ ಕುಮಾರಣ್ಣ ಜೊತೆಗೆ ನಾಳೆ ಸಭೆ ಇದೆ : ಹರೀಶ್ ಗೌಡ
ಈ ವಿಡಿಯೋದ ಆಧಾರದ ಅನ್ವಯ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ. ಇದೊಂದು ಕೋಮು ಸೌಹಾರ್ಧತೆಗೆ ಧಕ್ಕೆ ತರುವ ವಿಡಿಯೋ ತುಣುಕಾಗಿದ್ದು, ಸಮಾಜದಲ್ಲಿ ದ್ವೇಷ ಹರಡಿಸುವಂತಿದೆ ಹೀಗಾಗಿ ಯತಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ಪೊಲೀಸ್ ಆಯುಕ್ತ ಅಜಯ್ ಕುಮಾರ್ ತಿಳಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.