ಬೆಂಗಳೂರು: ಇಂದು ಅತ್ಯಂತ ಸಂತೋಷದಿಂದ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಿದ್ದೇನೆ. 10-15 ಲಕ್ಷ ಜನ ಬರೋ ನಿರೀಕ್ಷೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
213 ನೇ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ರಾಜ್ಯದ ಸಸ್ಯಸಂಪತ್ತಿನ ಪ್ರದರ್ಶನ ಆಗ್ತಿದೆ. ರಾಜ್ಯದಲ್ಲಿ ಹಸಿರು ವಿಸ್ತರಣೆಗಾಗಿ 100 ಕೋಟಿ ರೂಪಾಯಿ ಕೊಟ್ಟಿದ್ದೇನೆ , ರಾಜ್ಯದ ತೋಟಗಾರಿಕೆಯಿಂದ ಹಸಿರು ಹೆಚ್ಚಾಗಿ, ಉತ್ಪಾದನೆ ಹೆಚ್ಚಾಗುತ್ತದೆ. ಬೆಂಗಳೂರು ಗಾರ್ಡನ್ ಸಿಟಿ ಎಂದು ಹೆಸರಾಗಿತ್ತು. ಬೆಂಗಳೂರಿನ ಗಾರ್ಡನ್ ಗಳನ್ನು ಬೆಳೆಸುತ್ತೇವೆ. ಗಾರ್ಡನ್ ಸಿಟಿಯ ಗತವೈಭವ ಮತ್ತೆ ಮರುಕಳಿಸಲಿ ಎಂದು ಹೇಳಿದರು.
ಇಂದಿನಿಂದ ಜನವರಿ 30ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಫ್ಲವರ್ ಶೋನಿಂದ ಸಸ್ಯ ಸಂಪತ್ತು ಪ್ರದರ್ಶನ ಆಗುತ್ತಿದೆ. ರಾಜ್ಯಾದ್ಯಂತ ಹಸಿರು ವಿಸ್ತರಣೆ ಆಗಬೇಕಿದೆ. ರಾಜ್ಯದಲ್ಲಿ ಹಸಿರೀಕರಣ ವಿಸ್ತರಣೆಗೆ ಬಜೆಟ್ ನಲ್ಲಿ 100 ಕೋಟಿ ಮೀಸಲಿಡುತ್ತೇವೆ.
ಗುಡ್ಡಗಾಡು ಪ್ರದೇಶದಲ್ಲಿ ಹಸಿರು ಸಮೃದ್ಧಿಯಾಗಬೇಕು. ತೋಟಗಾರಿಕೆ ಫಾರ್ಮ್ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.