ಬೆಂಗಳೂರು : ಹೊರ ರಾಜ್ಯಗಳ ಜೊತೆ ಅಕ್ಕಿ ಟೆಂಡರ್ ಒಂದು ವಾರದಲ್ಲಿ ಇತ್ಯರ್ಥವಾಗಲಿದೆ ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
ಆಹಾರ ಮತ್ತು ನಾಗರೀಕ ಸರಬರಾಜು ಮಂಡಳಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ 97 ಲಕ್ಷ ಕಾರ್ಡಿಗೆ ರೇಷನ್ ಕೊಡಲಾಗಿದೆ, ಮೂರುವರೆ ಕೋಟಿ ಜನರಿಗೆ ಯೋಜನೆ ತಲುಪಿದೆ. ಈ ಯೋಜನೆಯ ಫಲಕಾರಿಯಾಗಲು ರಾಜ್ಯದಿಂದ 566 ಕೋಟಿ ರೂ. ಹಣ ನೀಡಿದ್ದು, 3 ಲಕ್ಷ 69 ಸಾವಿರ ಜನರ ಬ್ಯಾಂಕ್ ಖಾತೆಗೆ ಹಣ ಹಾಕಲಾಗಿದೆ. ಉಳಿದಂತೆ ಸುಮಾರು 29 ಲಕ್ಷ ಕಾರ್ಡುಗಳಿಗೆ ಬ್ಯಾಂಕ್ ಖಾತೆಯೇ ಆಗಿಲ್ಲ ಎಂದರು.
ಇದನ್ನೂ ಓದಿ : ಸಿದ್ದರಾಮಯ್ಯ ನ್ಯಾಚುರಲ್ ಲೀಡರ್ : ಸಚಿವ ಹೆಚ್.ಸಿ.ಮಹದೇವಪ್ಪ
ಯೋಜನೆ ಸರಿಯಾಗಿ ಜನರನ್ನು ತಲುಪುತ್ತಿಲ್ಲಾ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಸುಮಾರು ಎಂಟರಿಂದ ಹತ್ತು ಲಕ್ಷ ಕಾರ್ಡಿಗೆ ಯೋಜನೆ ನೀಡಲು ಆಗುತ್ತಿಲ್ಲ. ಕೆಲವರು ತಗೋತಿಲ್ಲ ಕೆಲವರಿಗೆ ತಾಂತ್ರಿಕ ಸಮಸ್ಯೆ ಇದೆ. ಇದರ ಜೊತೆ 5 ಲಕ್ಷ ಜನ ಕಾರ್ಡು ಇಲ್ಲದವರಿದ್ದಾರೆ. ಅಂತ್ಯೋದಯ ಯೋಜನೆಯ ಅನ್ವಯ ಎಷ್ಟು ಜನ ಇದ್ದರು, ಮನೆಯ ಮೂವರಿಗೆ 35 ಕೆಜಿ ಸಿಗುತ್ತಿದೆ. ನಮ್ಮ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
2 ಲಕ್ಷ ಪಡಿತರ ಖಾತೆಗಳನ್ನು ನಾವು ಈಗಾಗಲೇ ಸೇರಿಸಿದ್ದೇವೆ. ಉಳಿದಿರುವುದು ಕೇವಲ 14 ಲಕ್ಷ ಪಡಿತರ ಖಾತೆ ಅಷ್ಟೇ, ಇಷ್ಟೂ ಕಾರ್ಡುಗಳ ಖಾತೆಯನ್ನು ನಮ್ಮ ಸಿಬ್ಬಂದಿ ಮೂಲಕವೇ ಮಾಡಿಸುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅನ್ವರ್ ಭಾಷಾ ಆಯ್ಕೆ; ಅಧಿಕೃತ ಘೋಷಣೆ ಬಾಕಿ
ಸರ್ವರ್ ಸಮಸ್ಯೆ ಹಿನ್ನೆಲೆ ಡಿವಿಷನ್ ವೈಸ್ ಯೋಜನೆಯು ಎಲ್ಲರನ್ನು ತಲುಪುವಂತೆ ಮಾಡಲಾಗ್ತಿದೆ. ಸರ್ವರ್ ಸಮಸ್ಯೆಗೆ ಹೊಸ ಕ್ಲೌಡ್ ತೆಗೆದುಕೊಳ್ಳಲಾಗ್ತಿದೆ. ಹೊರ ರಾಜ್ಯಗಳ ಜೊತೆ ಅಕ್ಕಿ ಟೆಂಡರ್ ಒಂದು ವಾರದಲ್ಲಿ ಇತ್ಯರ್ಥವಾಗಲಿದೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.