ಬೆಂಗಳೂರು: ಗುಜರಾತ್ ನಲ್ಲಿ ಬಿಜೆಪಿ ಬರುತ್ತೆ ಅಂತಾ ನಿರೀಕ್ಷೆ ಇತ್ತು. ಆಪ್ ಸ್ಪರ್ಧೆ ಮಾಡಿ ಕಾಂಗ್ರೆಸ್ ಮತ ತಿಂದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಆಪ್ ಪಡೆದ ಮತಗಳೆಲ್ಲಾ ಕಾಂಗ್ರೆಸ್ ಪಕ್ಷದ್ದು, ಒಂದು ರಾಜ್ಯದ ಚುನಾವಣಾ ಫಲಿತಾಂಶ ಗಾಳಿ ಇನ್ನೊಂದು ರಾಜ್ಯಕ್ಕೆ ಬೀಸೋದಿಲ್ಲ. ಫಲಿತಾಂಶ ಕರ್ನಾಟಕದ ಮೇಲೆ ಯಾವ ಪರಿಣಾಮ ಕೂಡ ಬೀರೋದಿಲ್ಲ. ಇಲ್ಲಿಯ ಬಿಜೆಪಿ ಸರಕಾರ ಅತಿ ಭ್ರಷ್ಟ ಸರಕಾರ. ಕಾಂಗ್ರೆಸ್ ಸಂಘಟನೆ ಇಲ್ಲಿ ಶಕ್ತಿಯುತವಾಗಿದೆ ಎಂದು ಹೇಳಿದ್ದಾರೆ.
ಗುಜರಾತ್ ಅನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಬೇಡಿ ಕರ್ನಾಟಕ ಬಿಜೆಪಿಗೆ ತಾವು ಸೋಲುತ್ತೇವೆ ಅನ್ನೋದು ಗೊತ್ತಿದೆ. ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಇದು ಕಾಂಗ್ರೆಸ್‌ಗೆ ಪ್ಲಸ್ ಆಗಿದೆ. ಗುಜರಾತ್ ನಲ್ಲಿ ಆಪ್ ಪಕ್ಷ ಬಹಳ ಹಣ ಖರ್ಚು ಮಾಡಿತು. ಬಿಜೆಪಿಯೇ ಆಪ್‌ಗೆ ಫಂಡ್ ಮಾಡಿದೆ. ಕಾಂಗ್ರೆಸ್ ಮತ ವಿಭಜನೆಗಾಗಿ ಆಪ್ ಪಕ್ಷಕ್ಕೆ ಬಿಜೆಪಿ ಫಂಡ್ ಮಾಡಿದೆ. ಜೆಡಿಎಸ್ ಜೊತೆ ಇಲ್ಲಿ ಬಿಜೆಪಿ ತಂತ್ರಗಾರಿಕೆ ಮಾಡಬಹುದು. ಆದರೆ ಅದು ಇಲ್ಲಿ ನಡೆಯೋದಿಲ್ಲ ಎಂದರು.
ಗುಜರಾತ್‌ನಲ್ಲಿ ಆಪ್ ಪಕ್ಷಕ್ಕೆ ಬಿಜೆಪಿಯೇ ಫಂಡ್ ಮಾಡಿ ವೋಟ್‌ನ್ನು ಡಿವೈಡ್ ಮಾಡಿದೆ. ಆದರೆ, ಕರ್ನಾಟಕದಲ್ಲಿ ಇದ್ಯಾವುದು ಆಗೋಕೆ ಸಾಧ್ಯವಿಲ್ಲ. ಆಪ್‌ಗೆ ಕರ್ನಾಟಕದಲ್ಲಿ ಹೆಸರೇ ಇಲ್ಲ ಎಂದು ಚುನಾವಣೆ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕರ್ನಾಟಕದಲ್ಲಿ ನಾವೇನೂ ಮಾಡೋ ಅಗತ್ಯವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸುಮ್ನೆ ಇದ್ರೂ ಗೆಲುವು ಸಾಧಿಸುತ್ತದೆ ಎಂದರು.