ಹಾವೇರಿ : ಬಹುಮತ ಪಡೆದ ಸರ್ಕಾರ ಯಾವ ರೀತಿ ಆಡಳಿತ ಮಾಡಬೇಕು ಆ ರೀತಿ ಕೆಲಸ ಮಾಡ್ತಾ ಇಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಶಿರಡಿ ಸಾಯಿಬಾಬಾ ದೇವಾಲಯ ಲೋಕಾರ್ಪಣೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರಕ್ಕೆ ನೂರು ದಿನ ಪೂರೈಸಿದ ಹಿನ್ನೆಲೆ , ಮುಂದಿನ ಒಂದು ವರ್ಷ ಯಾವುದೇ ಅಭಿವೃದ್ಧಿ ಆಗದ ಹಾಗೆ ಅಭಿವೃದ್ಧಿಯನ್ನೇ ಸ್ಥಬ್ದ ಮಾಡಿಬಿಟ್ಟಿದ್ದಾರೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ನೂರು ದಿನಗಳಲ್ಲಿ, ವಿಧಾನಸೌಧದ ಮೂಲೆ ಮೂಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಅಭಿವೃದ್ಧಿಯ ಯಾವುದೇ ಲಕ್ಷಣ ಕಾಣ್ತಾ ಇಲ್ಲ , ರಸ್ತೆಗೆ ಹಿಡಿ ಮಣ್ಣು ಹಾಕುವುದಕ್ಕೂ ಆಗ್ತಾ ಇಲ್ಲ ಎಂದು ತಿಳಿಸಿದರು, ರಾಜ್ಯದಲ್ಲಿ ಬರಗಾಲದ ಛಾಯೆ ಇದೆ, ಬರಗಾಲ ಘೋಷಣೆ ಮಾಡುತ್ತೇವೆ ಎಂದು ಜೂನ್, ಜುಲೈ ನಲ್ಲಿ ಹೇಳಿದರು, ಆದರೆ ಇದುವರೆಗೂ ಬರಗಾಲ ಘೋಷಣೆ ಮಾಡಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ : ಶೋಭಾ ಯಾತ್ರೆ ಬದಲು ದೇವಸ್ಥಾನಕ್ಕೆ ಹೋಗಿ : ಹಿಂದುತ್ವ ಸಂಘಟನೆಗಳಿಗೆ ಹರಿಯಾಣ ಸಿಎಂ ಮನವಿ
ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕ್ತಾ ಇದೆ, ಗುತ್ತಿಗೆದಾರರಿಗೆ ಬಿಲ್ ಕೊಡೋದಕ್ಕೂ ಸಹಿತ ಕಮಿಷನ್ ಪಡೆಯಲಾಗ್ತಾ ಇದೆ , ಇಲಾಖೆಗಳಲ್ಲಿ ಕಮಿಷನ್ ದಂಧೆ ಹೆಚ್ಚಾಗ್ತಾ ಇದೆ, ಡಿ.ಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ನಡುವಿನ ಸಿಎಂ ಪೈಪೋಟಿ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಿದೆ, ರಾಜ್ಯದ ಜಲವನ್ನು ಕಾಪಾಡುವುದರಲ್ಲಿ ವಿಫಲರಾಗಿದ್ದಾರೆ ಎಂದು ವಿವರಿಸಿದರು.
ನೀರಾವರಿ ಯೋಜನೆಗಳು ಸ್ಥಬ್ದವಾಗಿವೆ,ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಕೊಲೆ ಸುಲಿಗೆ ದಿನ ನಿತ್ಯ ನಡೆಯುತ್ತಾ ಇದೆ, ರಾಜ್ಯದ ಜನರ ನಿರೀಕ್ಷೆ ನೂರು ದಿನಗಳಲ್ಲಿ ಹುಸಿ ಮಾಡಿದ್ದಾರೆ ಎಂದು ವಿವರಿಸಿದರು. ಮುನೇನಕೊಪ್ಪ ಪ್ರೆಸ್ ಮೀಟ್ ವಿಚಾರ, ಸೋತಿರುವ ಸಂದರ್ಭದಲ್ಲಿ ಬಹಳಷ್ಟು ವಿಚಾರ ಹೊರಗಡೆ ಬರ್ತಾ ಇದೆ, ಕೂತುಕೊಂಡು ಸಮಾಧಾನ ಪಡಿಸುವ ಶಕ್ತಿ ನಮಗಿದೆ ಎಂದರು.


ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ 20 , 21 ಕ್ಷೇತ್ರ ಗೆಲ್ತೀವಿ ಅಂತಿದ್ದಾರೆ, ಆದರೆ ಅವರ ಬಳಿ ಕ್ಯಾಂಡಿಡೇಟ್ ಗಳೇ ಇಲ್ಲ, ಹೀಗಾಗಿ ನಮ್ಮವರನ್ನು ಆಪರೇಷನ್ ಮಾಡುವ ದುಸ್ಥಿತಿ ಬಂದಿದೆ, ರೇಣುಕಾಚಾರ್ಯ ಕಾಂಗ್ರೆಸ್ ಸೇರ್ತಾರೆ ಎಂಬ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ವರಿಷ್ಟರು ಇದರ ಬಗ್ಗೆ ಎಲ್ಲವನ್ನೂ ಗಮನಿಸಿದ್ದಾರೆ, ಕುಳಿತುಕೊಂಡು ಮಾತಾಡ್ತೇವೆ, ಐದು ಗ್ಯಾರಂಟಿಗಳಿಂದ ಸರ್ಕಾರ ವಿವಿಧ ಯೋಜನೆಗಳಿಗೆ ಅನುದಾನ ಕೊರತೆ ವಿಚಾರವಾಗಿ ಮಾತನಾಡಿ, ಈಗಾಗಲೇ ಸರ್ಕಾರಿ ನೌಕರರ ಸಂಬಳ ಸರಿಯಾಗಿ ಬರ್ತಾ ಇಲ್ಲ, ಸಾರಿಗೆ ನೌಕರರ ಸಂಬಳ ಕೂಡಾ ಆಗ್ತಾ ಇಲ್ಲ, ಕರೆಂಟ್ ಬಿಲ್ ಜಾಸ್ತಿ ಮಾಡಿದ್ರು , ರೈತರಿಗೆ ಸರಿಯಾಗಿ ಕರೆಂಟ್ ಕೊಡ್ತಾ ಇಲ್ಲ, ಮುಂದಿನ ದಿನಗಳಲ್ಲಿ ನೀರಿನ ಕ್ಷಾಮ ಹಾಗೂ ವಿದ್ಯುತ್ ಕ್ಷಾಮ ರಾಜ್ಯ ಎದುರಿಸಲಿದೆ ಎಂದು ಆತಂಕವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಷ್ಟು ರೈತರ ಆತ್ಮಹತ್ಯೆ ಆಗಿದೆ ಅದರಲ್ಲಿ ಅರ್ಧದಷ್ಟು ನಮ್ಮ ಹಾವೇರಿ ಜಿಲ್ಲೆಯಲ್ಲಿ ಆಗಿರೋದು ದುರಂತ, ಸಿಎಂ ಜಿಲ್ಲೆಗೆ ಬಂದು ಹೋದರೂ ಯಾವುದೇ ಸಹಾಯ ಸಹಕಾರ, ಆತ್ಮಸ್ಥೈರ್ಯ ರೈತರಿಗೆ ಸಿಕ್ಕಿಲ್ಲ, ರೈತರನ್ನು ಈ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ, ಎರಡು ಮೂರು ಬಾರಿ ಬಿತ್ತನೆ ಮಾಡಿದರೂ ಬೆಳೆ ಕೈಗೆ ಬಂದಿಲ್ಲ, ಸರಿಯಾದ ಸಮಯಕ್ಕೆ ಸಾಲ ಸಿಗ್ತಿಲ್ಲ , ಸಾಲ ವಸೂಲಾತಿ ಮತ್ತೆ ಪ್ರಾರಂಭವಾಗಿದೆ, ಸರ್ಕಾರ ರೈತ ವಿರೋಧಿ, ಅಭಿವೃದ್ಧಿ ವಿರೋಧಿ ಜೊತೆಗೆ ಮಾನವೀಯತೆ ಕಳೆದುಕೊಂಡಿರೋ ಸರ್ಕಾರವಾಗಿದ್ದು, ಈ ಎಲ್ಲಾ ಕಾರಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.