ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಫೇಸ್‌ಬುಕ್ ಖಾತೆಯನ್ನು ಕಿಡಿಗೇಡಿಗಳು ಇಂದು ಹ್ಯಾಕ್ ಮಾಡಿದ್ದು, ಅವರ ಪ್ರೊಫೈಲ್‌ನಲ್ಲಿ ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದ್ದರು.
ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಎಚ್ಚೆತ್ತ ಹೆಚ್.ಡಿ.ಕುಮಾರಸ್ವಾಮಿ ಅವರ ಸೋಶಿಯಲ್ ಮೀಡಿಯಾ ತಂಡ ಅಶ್ಲೀಲ ಫೋಟೋ ಡಿಲೀಟ್ ಮಾಡಿದೆ.


ಕಿಡಿಗೇಡಿಗಳು ಹೆಚ್‌ಡಿಕೆಯ ಪ್ರೊಫೈಲ್ ಫೋಟೋ ಬದಲಾಯಿಸಿ ಯುವತಿಯ ಅಶ್ಲೀಲ ಫೋಟೋ ಅಪ್ಡೇಟ್ ಮಾಡಿದ್ದರು. ಸೋಶಿಯಲ್ ಮೀಡಿಯಾ ತಂಡ ಅದನ್ನು ಡಿಲೀಟ್ ಮಾಡಿ ಮತ್ತೆ ಕುಮಾರಸ್ವಾಮಿಯವರ ಫೋಟೋ ಹಾಕಿದೆ. ಸದ್ಯ ಹೆಚ್‌ಡಿಕೆ ಖಾತೆ ಮೊದಲಿನಂತೆ ಕಾರ್ಯನಿರ್ವಹಿಸುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.